ಮಳೆಗೆ ಟಿನ್‌ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

| Published : Oct 19 2024, 12:26 AM IST

ಸಾರಾಂಶ

Tin shed wall collapsed due to rain and old woman died

ಧಾರಾಕಾರವಾಗಿ ಸುರಿದ ಮಳೆಗೆ ಟಿನ್ ಶೆಡ್ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಚಿಂತನಹಳ್ಳಿ ಗ್ರಾಮದ ಗುಂಜಲಮ್ಮ (68) ಮೃತ ವೃದ್ಧೆ. ಈ ಘಟನೆ ರಾತ್ರಿ ವೇಳೆ ಮನೆಯಲ್ಲಿ‌ ಮಲಗಿದ್ದಾಗ ಸಂಭವಿಸಿದೆ. ವೃದ್ಧೆಯ ಜೊತೆಗಿದ್ದ ವೃದ್ಧೆಯ ಸಹೋದರನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.