ಸಾರಾಂಶ
ರಾಯಚೂರಿನ ಲಿಂಗಸೂರಿನ ರಮೇಶ್ (35) ಅಪಘಾತದಲ್ಲಿ ಸಾವಿಗೀಡಾದ ಚಾಲಕ. ಗಣಿ ಅಧಿಕಾರಿ ಸವಿತಾ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ಅವರು ತಮ್ಮ ವಾಹನದಲ್ಲಿ ಟಿಪ್ಪರ್ ಲಾರಿ ಚೇಸ್ ಮಾಡಿದ್ದರು.
ಚಿಕ್ಕಬಳ್ಳಾಪುರ: ಅಕ್ರಮ ಗಣಿಗಾರಿಕೆ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 44ರ ಕೃಷ್ಣ ಕನ್ವೆನ್ಷನ್ ಸೆಂಟರ್ ಬಳಿ ನಡೆದಿದೆ.
ರಾಯಚೂರಿನ ಲಿಂಗಸೂರಿನ ರಮೇಶ್ (35) ಅಪಘಾತದಲ್ಲಿ ಸಾವಿಗೀಡಾದ ಚಾಲಕ. ಗಣಿ ಅಧಿಕಾರಿ ಸವಿತಾ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ಅವರು ತಮ್ಮ ವಾಹನದಲ್ಲಿ ಟಿಪ್ಪರ್ ಲಾರಿ ಚೇಸ್ ಮಾಡಿದ್ದರು. ಈ ವೇಳೆ ಗಣಿ ಅಧಿಕಾರಿ ತನ್ನನ್ನು ಬಂಧಿಸುತ್ತಾರೆ ಎಂದು ಗಣಿ ಅಧಿಕಾರಿಗೆ ಹೆದರಿ ಟಿಪ್ಪರ್ ಚಾಲಕ ರಮೇಶ್ ಓಡಿ ಹೋಗಿಲು ಯತ್ನಿಸಿ, ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಲು ಮುಂದಾಗಿ, ಓಡಿ ಹೋಗುವಾಗ ಎದುರಿನಿಂದ ಬಂದ ಕಾರಿಗೆ ಅಡ್ಡ ಸಿಕ್ಕಿದ್ದಾನೆ. ಕಾರು ಡಿಕ್ಕಿ ಹೊಡೆದು ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಆನಂದ್ ಎಂಬುವರ ಮಾಲೀಕತ್ವದ ಟಿಪ್ಪರ್ ಲಾರಿ ಇದಾಗಿದ್ದು, ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಟಿಪ್ಪರ್ ಲಾರಿ ಹಾಗೂ ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಕೆಬಿ-4 ರಮೇಶ್;Resize=(128,128))
;Resize=(128,128))
;Resize=(128,128))
;Resize=(128,128))