ಪರ್ಮಿಟ್‌ ಇಲ್ಲದೆ ಟಿಪ್ಪರ್‌ ಸಂಚಾರ; ೬ ಟಿಪ್ಪರ್‌ ವಶ

| Published : Jan 11 2025, 12:47 AM IST

ಪರ್ಮಿಟ್‌ ಇಲ್ಲದೆ ಟಿಪ್ಪರ್‌ ಸಂಚಾರ; ೬ ಟಿಪ್ಪರ್‌ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಭೂ ವಿಜ್ಞಾನಿ ಟಿಪ್ಪರ್‌ ತಡೆದು ತಪಾಸಣೆ ನಡೆಸುತ್ತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೆಳ್ಳಂ ಬೆಳಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ಭೂ ವಿಜ್ಞಾನಿ ಕಾರ್ಯಾಚರಣೆ ನಡೆಸಿದ್ದು, ಪರ್ಮಿಟ್‌ ಇಲ್ಲದೆ ಸಂಚರಿಸುತ್ತಿದ್ದ ೬ ಟಿಪ್ಪರ್‌ಗಳನ್ನು ಸೀಜ್‌ ಮಾಡಿದ್ದಾರೆ.

ಮೊದಲೇ ಪರ್ಮಿಟ್‌ ಹಾಗೂ ಎಂಡಿಪಿ ಹಾಕದೆ ವಂಚನೆಯೇ ಕಸುಬಾನ್ನಾಗಿಸಿಕೊಂಡಿದ್ದಾರೆ ಎಂಬ ಕೆಲ ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ಮೇಲೆ ಆರೋಪವಿದೆ. ಈ ವೇಳೆ ಪರ್ಮಿಟ್‌ ಹಾಕದೆ ಶುಕ್ರವಾರ ಮುಂಜಾನೆ ಭೂ ವಿಜ್ಞಾನಿ ನಾಗಮಧು ಗೌಡ ತಪಾಸಣೆ ನಡೆಸಿ 6 ಟಿಪ್ಪರ್‌ ಸೀಜ್‌ ಮಾಡಿ ಬೇಗೂರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಕಳ್ಳ ಸಾಗಣೆ ಬಯಲು:

ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ಪರ್ಮಿಟ್‌ ಹಾಗೂ ಎಂಡಿಪಿ ವಂಚಿಸಿ ಕದ್ದು ಸಾಗಿಸುತ್ತಿದ್ದು ಬೆಳಕಿಗೆ ಬಂದಿದೆ. ಪರ್ಮಿಟ್‌ ಹಾಗೂ ಎಂಡಿಪಿ ಇಲ್ಲದೆ ಉಪ ಖನಿಜ ಕದ್ದು ಸಾಗಾಣಿಕೆ ಹಾಗೂ ಓವರ್‌ ಲೋಡ್‌ ಕಲ್ಲು ಸಾಗಾಣಿಕೆ ಮಾಡುವ ಸಂಬಂಧ ಪ್ರತ್ಯೇಕ ಕೇಸು ದಾಖಲಿಸುವ ಕೆಲಸ ಆಗಬೇಕಿದೆ. ಹಿರೀಕಾಟಿ ಗೇಟ್‌ ಬಳಿ ಖನಿಜ ತನಿಖಾ ಠಾಣೆ ಇದ್ದರೂ ಯಾವ ಟಿಪ್ಪರ್ ಗಳು ನಿಲ್ಲುತ್ತಿಲ್ಲ. ಸಾಗಿಸುತ್ತಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹೀಗಿದ್ದ ಮೇಲೆ ಖನಿಜ ತನಿಖಾ ಠಾಣೆ ಮುಚ್ಚೋದು ವಾಸಿ ಎಂಬ ಮಾತು ಕುಹಕವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಪರ್ಮಿಟ್‌, ಎಂಡಿಪಿ ಇಲ್ಲದ ಟಿಪ್ಪರ್‌ಗಳ ತಡೆದು ತಪಾಸಣೆ ನಡೆಸಿದಾಗ ಕದ್ದು ಸಾಗಿಸುತ್ತಿರುವುದು ಬೆಳಕಿಗೆ ಬಂತು. ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗುವುದು.ನಾಗಮಧು ಗೌಡ, ಭೂ ವಿಜ್ಞಾನಿ