ತಾಲೂಕಿನ ಹಿರೀಕಾಟಿ ಬಳಿಯಿರುವ ಕ್ರಷರ್‌ನತ್ತ (ನಂಜನಗೂಡು ತಾಲೂಕಿಗೆ ಸೇರಿದ) ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಜೀಪು ನೋಡಿದ ಪರ್ಮಿಟ್ ಇಲ್ಲದೆ ಕದ್ದು ಸಾಗಾಣಿಕೆ ಮಾಡುತ್ತಿದ್ದ ಕೆಲ ಟಿಪ್ಪರ್‌ಗಳು ವೇಗವಾಗಿ ಬಂದು ಗುಂಡ್ಲುಪೇಟೆ ತಾಲೂಕಿಗೆ ಸೇರಿದ ಹಿರೀಕಾಟಿ ಬಳಿಯ ಚಾಮುಂಡೇಶ್ವರಿ ಕ್ರಷರ್‌ನೊಳಗೆ ಬಂದು ಕೆಲ ಕಾಲ ನಿಂತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಸು ಹಾಗೂ ದಂಡದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಿರೀಕಾಟಿ ಬಳಿಯಿರುವ ಕ್ರಷರ್‌ನತ್ತ (ನಂಜನಗೂಡು ತಾಲೂಕಿಗೆ ಸೇರಿದ) ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಜೀಪು ನೋಡಿದ ಪರ್ಮಿಟ್ ಇಲ್ಲದೆ ಕದ್ದು ಸಾಗಾಣಿಕೆ ಮಾಡುತ್ತಿದ್ದ ಕೆಲ ಟಿಪ್ಪರ್‌ಗಳು ವೇಗವಾಗಿ ಬಂದು ಗುಂಡ್ಲುಪೇಟೆ ತಾಲೂಕಿಗೆ ಸೇರಿದ ಹಿರೀಕಾಟಿ ಬಳಿಯ ಚಾಮುಂಡೇಶ್ವರಿ ಕ್ರಷರ್‌ನೊಳಗೆ ಬಂದು ಕೆಲ ಕಾಲ ನಿಂತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಸು ಹಾಗೂ ದಂಡದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ.ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ಸೇರಿದ ಹಿರೀಕಾಟಿ ಬಳಿಯಿರುವ ಕ್ರಷರ್‌ಗೆ ತಾಲೂಕಿನ ಕ್ವಾರಿಗಳಿಂದ ಪರ್ಮಿಟ್ ವಂಚಿಸಿ ಕಲ್ಲು ಸಾಗಾಣಿಕೆ ದಂಧೆ ನಡೆಯುತ್ತಿದೆ (ಕದ್ದು ಮುಚ್ಚಿ ಏನಿಲ್ಲ).ಬುಧವಾರ ಓವರ್ ಲೋಡ್ ಕಲ್ಲು ತುಂಬಿದ ಟಿಪ್ಪರ್ ಗಳು ನಂಜನಗೂಡು ತಾಲೂಕಿನ ಕ್ರಷರ್‌ಗೆ ಸಾಗಿಸುವಾಗ ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಜೀಪು ಬರುವ ಮಾಹಿತಿ ತಿಳಿದ ಕೆಲ ಟಿಪ್ಪರ್‌ಗಳು ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿಯ ಚಾಮುಂಡೇಶ್ವರಿ ಕ್ರಸರ್ ಗೆ ಬಂದು ನಿಂತಿವೆ.
ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಂಜನಗೂಡು ಗಡಿ ತನಕ ತಪಾಸಣೆ ಮಾಡಲು ಅವಕಾಶವಿದೆ. ಗುಂಡ್ಲುಪೇಟೆ ತಾಲೂಕಿನಿಂದ ನಂಜನಗೂಡು ತಾಲೂಕಿನ (ಹಿರೀಕಾಟಿ ಬಳಿ) ಕ್ರಷರ್‌ಗೆ ತೆರಳುತ್ತಿದ್ದ ಟಿಪ್ಪರ್‌ಗಳ ತಪಾಸಣೆಗೆ ಅವಕಾಶವಿದೆ.ಮೈಸೂರು ಜಿಲ್ಲೆಯ ಅಧಿಕಾರಿಗಳು ಗುಂಡ್ಲುಪೇಟೆ ತಾಲೂಕಿನ ಕ್ರಸರ್ ಬರಲ್ಲ.ಮೊದಲೇ ಪರ್ಮಿಟ್ ಇಲ್ಲ,ಓವರ್ ಲೋಡ್ ಕಲ್ಲು ಇದೆ ಹಿಡಿದರೆ ದಂಡ ಹಾಗೂ ಕೇಸು ಗ್ಯಾರಂಟಿ ಎಂದು ಖಚಿತ ಪಡಿಸಿಕೊಂಡ ಟಿಪ್ಪರ್ ಗಳು ಗುಂಡ್ಲುಪೇಟೆ ತಾಲೂಕಿನ ಕ್ರಷರ್‌ನೊಳಗೆ ತಂದು ನಿಲ್ಲಿಸಿ ಬಚಾವ್ ಆಗಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಸೆರೆ:ಮೈಸೂರು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಟಿಪ್ಪರ್ ಹಿಡಿದು ಕೇಸು ಅಥವಾ ದಂಡ ಹಾಕುತ್ತಾರೆ ಎಂದು ತಪ್ಪಿಸಿಕೊಂಡು ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿಯ ಚಾಮುಂಡೇಶ್ವರಿ ಕ್ರಷರ್‌ನೊಳಗೆ ಓವರ್ ಲೋಡ್ ಕಲ್ಲು ತುಂಬಿದ ಟಿಪ್ಪರ್ ಬಂದು ನಿಂತ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಓವರ್ ಲೋಡ್ ಕಲ್ಲು ತುಂಬಿದ ಟಿಪ್ಪರ್‌ಗೆ ಪರ್ಮಿಟ್ ಇದ್ದರೆ ಖಂಡಿತ ಅಧಿಕಾರಿಗಳು ತಪಾಸಣೆ ನಡೆಸುವಾಗ ಹೋಗುವ ಧೈರ್ಯ ಟಿಪ್ಪರ್ ಮಾಲೀಕ/ಚಾಲಕ ತೋರಬಹುದಿತ್ತು. ಪರ್ಮಿಟ್ ಇರದ ಕಾರಣ ಹಾಗೂ ಮೇಲೋದಿಕೆ ಇಲ್ಲದ ಕಾರಣ, ಓವರ್ ಲೋಡ್ ಇದ್ದರಿಂದ ತಪಾಸಣೆಗೆ ಹೆದರಿ, ಮತ್ತೊಂದು ಕ್ರಷರ್‌ನೊಳಗೆ ಅವಿತುಕೊಳ್ಳಲು ಹೊರಟಂತಿದೆ ಟಿಪ್ಪರ್ ಚಾಲಕರ ನಡೆ.ನನ್ನ ಕ್ರಷರ್‌ಗೆ ಇದೇನಪ್ಪ ಬೇರೆ ಟಿಪ್ಪರ್ ಬಂತಲ್ಲ ಅನಿಸಿತು.ಆ ಮೇಲೆ ಗೊತ್ತಾಯಿತು ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಪಾಸಣೆಗೆ ಬಂದ ಕಾರಣ ನನ್ನ ಕ್ರಷರ್‌ಗೆ ಟಿಪ್ಪರ್ ಬಂದು ನಿಂತು ಹೋಗಿರುವುದು ಪತ್ತೆಯಾಗಿದೆ ಎನ್ನುತ್ತಾರೆ ಚಾಮುಂಡೇಶ್ವರಿ ಕ್ರಷರ್ ಮಾಲೀಕ ಎಚ್.ಎಸ್.ದಿನೇಶ್.
ಕೆಲ ಕ್ರಸರ್ ಹಾಗೂ ಟಿಪ್ಪರ್ ಮಾಲೀಕರು ಸತ್ಯವಂತರೆಂದು ಹೇಳಿಕೊಂಡು ಸಮಾಜದಲ್ಲಿ ಪೋಸು ನೀಡೋದು.ಪರ್ಮಿಟ್ ಇಲ್ಲದೆ,ಓವರ್ ಲೋಡ್‌ಗೆ ದಂಡ ಅಥವಾ ಕೇಸು ತಪ್ಪಿಸಿಕೊಳ್ಳಲು ಬೇರೆಯವರ ಕ್ರಸರ್ ಗೆ ಹೋಗಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಹಿರೀಕಾಟಿ ಸಾರ್ವಜನಿಕರು ಹೇಳುತ್ತಾರೆ.ಓವರ್ ಲೋಡ್ ತುಂಬಿದ ಕ್ರಸರ್ ಹಾಗೂ ಪರ್ಮಿಟ್ ಇಲ್ಲದೆ ಸಂಚರಿಸುವ ಟಿಪ್ಪರ್ ಗಳು ಕಡ್ಡಾಯವಾಗಿ ಪರಿಶೀಲನೆ ನಡೆಸಲು ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪತ್ರ ಬರೆಯುತ್ತೇನೆ.ಹಿರೀಕಾಟಿ ಖನಿಜ ತನಿಖಾ ಠಾಣೆಯಲ್ಲಿ ತಪಾಸಣೆ ತೀವ್ರಗೊಳಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ ಅಲ್ಲದೆ ನಾನೇ ದಿಡೀರ್ ದಾಳಿ ನಡೆಸುತ್ತೇನೆ ಎಂದು ಹಿರಿಯ ಭೂ ವಿಜ್ಞಾನಿ ನವೀನ್ ಹೇಳಿದ್ದಾರೆ.