ಟಿಪ್ಪು ಸುಲ್ತಾನ್ 232ನೇ ಉರುಸು ಸಂಭ್ರಮ, ಮೆರವಣಿಗೆ

| Published : Jun 07 2024, 12:32 AM IST

ಟಿಪ್ಪು ಸುಲ್ತಾನ್ 232ನೇ ಉರುಸು ಸಂಭ್ರಮ, ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮುಸ್ಲಿಂ ಭಾಂದವರು ಆಗಮಿಸಿ ಟಿಪ್ಪು ಸುಲ್ತಾನ್ ರವರ ಉರುಸು (ಮೆರವಣಿಗೆ)ಗೆ ಮೆರಗು ತಂದರು. ಟಿಪ್ಪು ವಕ್ಫ್ ಎಸ್ಟೇಟ್ ಕಮಿಟಿ ಸದಸ್ಯರು ಮತ್ತು ಅವರ ಧಾರ್ಮಿಕ ಗುರುಗಳು ತಲೆಯ ಮೆಲೆ ಗಂಧವನ್ನು ಹೊತ್ತು ಸಾಗಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಅವರ 232ನೇ ಉರುಸು ಅಂಗವಾಗಿ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು.

ಪಟ್ಟಣದ ಜಾಮಿಯಾ ಮಸೀದಿಯಿಂದ ಹೊರ ವಲಯದ ಗುಂಬಸ್‌ನ ಟಿಪ್ಪು ಸಮಾಧಿ ಸ್ಥಳಕ್ಕೆ ಪವಿತ್ರ ಗಂಧವನ್ನು ಮೆರವಣಿಗೆ ಮೂಲಕ ಹೊತ್ತು ಸಾಗಲಾಯಿತು.

ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮುಸ್ಲಿಂ ಭಾಂದವರು ಆಗಮಿಸಿ ಟಿಪ್ಪು ಸುಲ್ತಾನ್ ರವರ ಉರುಸು (ಮೆರವಣಿಗೆ)ಗೆ ಮೆರಗು ತಂದರು. ಟಿಪ್ಪು ವಕ್ಫ್ ಎಸ್ಟೇಟ್ ಕಮಿಟಿ ಸದಸ್ಯರು ಮತ್ತು ಅವರ ಧಾರ್ಮಿಕ ಗುರುಗಳು ತಲೆಯ ಮೆಲೆ ಗಂಧವನ್ನು ಹೊತ್ತು ಸಾಗಿದರು.

ರಸ್ತೆಯುದ್ದಕ್ಕೂ ಯುವಕರು ಟಿಪ್ಪು ಅವರ ವೇಷ ಭೂಷಣ ತೊಟ್ಟು, ಟಿಪ್ಪು ಸುಲ್ತಾನ್ ಭಾವಚಿತ್ರ ಹಿಡಿದು ಟಮಟೆ ಸದ್ದಿ ಹೆಚ್ಚೆ ಹಾಕಿದರು. ಮೆರವಣಿಗೆಯಲ್ಲಿ ಕುದುರೆ ಸವಾರಿ, ಕತ್ತಿವರಸೆ, ಟಿಪ್ಪು ವೇಶದಾರಿಗಳ ಮೂಲಕ, ಟಿಪ್ಪು ಬಾವುಟಗಳು ರಂಜಿಸುತ್ತಿದ್ದವು.

ನಂತರ ಗಂಜಾಂನ ಟಿಪ್ಪು ಸಮಾಧಿ ಗುಂಬಸ್‌ಗೆ ಸಾಗಿದ ಮೆರವಣಿಗೆ ಧರ್ಮಗುರುಗಳಿಂದ ಟಿಪ್ಪು ಸಮಾದಿಗೆ ಹೂವಿನ ಚಾದರ ಹೊದಿಸಿ, ಗಂಧದ ಲೇಪನ ಕಾರ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ಬಿಗಿ ಭದ್ರತೆ:

ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇತರ ಭಾಗಗಳಿಂದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಟಿಪ್ಪು ಉರುಸು ಅಂಗವಾಗಿ ಜಾಮಿಯಾ ಮಸೀದಿ ಹಾಗೂ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ನಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಮುರುಳಿ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.