ಸಾರಾಂಶ
ನ್ಯಾಮತಿ ತಾಲೂಕಿನ ಕೆಂಗಟ್ಟೆ ಗ್ರಾಮದ ರೈತ ಮಂಜನಾಯ್ಕ (60) ಮನೆಯ ತೊಲೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ, ನ್ಯಾಮತಿ
ತಾಲೂಕಿನ ಕೆಂಗಟ್ಟೆ ಗ್ರಾಮದ ರೈತ ಮಂಜನಾಯ್ಕ (60) ಮನೆಯ ತೊಲೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ರೈತ ಮಂಜನಾಯ್ಕ 3 ಎಕರೆ ಜಮೀನು ಹೊಂದಿದ್ದು, ಅಡಕೆ ಬೆಳೆಯೊಂದಿಗೆ ಮೆಕ್ಕೆಜೋಳ ಬೆಳೆ ಕೃಷಿ ಮಾಡಿದ್ದರು. ಬಿತ್ತನೆಬೀಜ, ರಸಗೊಬ್ಬರ ಹಾಗೂ ಔಷಧಿಗಾಗಿ ಸಾಲ ಮಾಡಿಕೊಂಡಿದ್ದರು. ಚೈತನ್ಯ ಇಂಡಿಯಾ ಫೈನಾನ್ಸ್‌ನಲ್ಲಿ ₹1 ಲಕ್ಷ ಸೇರಿದಂತೆ ಖಾಸಗಿಯಾಗಿಯೂ ಸಾಲಗಳ ಪಡೆದಿದ್ದರು. ಆದರೆ 3 ವರ್ಷಗಳಿಂದ ಕೃಷಿಯಲ್ಲಿ ನಷ್ಟಕ್ಕಿಡಾಗಿದ್ದರು.
ಇದರಿಂದ ಮನನೊಂದಿದ್ದ ಅವರು, ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತನ ಮಗ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.