ಸಾರಾಂಶ
ಇವರ ಸೇವೆ ಮತ್ತು ಕನ್ನಡಾಭಿಮಾನವನ್ನು ಗುರುತಿಸಿ, ತೀರ್ಥಂಕರ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಟ್ರಸ್ಟ್ ಪ್ರಶಸ್ತಿ (2022) ಸೇರಿದಂತೆ ಹಲವು ಗೌರವಗಳು ಲಭಿಸಿದ್ದು ಇವರ ಕನ್ನಡ ಹೋರಾಟದಿಂದ ಬೇಲೂರಿನ ವಾಟಾಳ್ ಎಂದೇ ಪ್ರಸಿದ್ಧರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಾರುತಿ ಸ್ಟೋರ್ ಮಾಲೀಕ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಬಿ.ಆರ್ ತೀರ್ಥಂಕರ್ ಹಲವಾರು ವರ್ಷಗಳಿಂದ ಕೆಂಪು, ಹಳದಿ ಬಣ್ಣದಿಂದ ತಮ್ಮ ಅಂಗಡಿ ಸಿಂಗರಿಸಿ ಕನ್ನಡಾಭಿಮಾನಿಗಳ ಪ್ರೀತಿಗೆ ಭಾಜನರಾಗಿದ್ದಾರೆ.ಕನ್ನಡ ರಾಜ್ಯೋತ್ಸವದ ಸಂಭ್ರಮದಂದು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮಾರುತಿ ಸ್ಟೋರ್‌ನಲ್ಲಿ ಒಪ್ಪವಾಗಿ ಜೋಡಿಸಿಟ್ಟಿರುವ ಕೆಂಪು ಮತ್ತು ಹಳದಿ ಬಣ್ಣದ ಗೃಹೋಪಯೋಗಿ ವಸ್ತುಗಳು ಜನರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ್ ಅವರು ತಮ್ಮ ಅಂಗಡಿಯಲ್ಲಿ ಕನ್ನಡ ಧ್ವಜದ ಬಣ್ಣದ ಪ್ಲಾಸ್ಟಿಕ್, ಕೃಷಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶಿಸಿ ಮಾರಾಟಕ್ಕೆ ಇಟ್ಟು, ರಾಜ್ಯೋತ್ಸವದಂದು ಕನ್ನಡಿಗರ ಭಾವನೆಗೆ ಜೀವ ತುಂಬಿದ್ದಾರೆ.
ಕನ್ನಡದ ನೆಲ, ಜಲ ಮತ್ತು ಭಾಷೆಗೆ ಧಕ್ಕೆ ಬಂದಾಗ ಹೋರಾಟದ ಮುಂಚೂಣಿಯಲ್ಲಿ ನಿಲ್ಲುವ ತೀರ್ಥಂಕರ್, ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ. 2008ರಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಬೇಲೂರು ತಾಲೂಕು ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ವರ್ಷಪೂರ್ತಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಹಳೆ ತಾಲೂಕು ಕಚೇರಿ ಮುಂಭಾಗ ಕನ್ನಡ ಧ್ವಜ ಸ್ಥಂಭ ನಿರ್ಮಿಸಿದ್ದಾರೆ.ಇವರ ಸೇವೆ ಮತ್ತು ಕನ್ನಡಾಭಿಮಾನವನ್ನು ಗುರುತಿಸಿ, ತೀರ್ಥಂಕರ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಟ್ರಸ್ಟ್ ಪ್ರಶಸ್ತಿ (2022) ಸೇರಿದಂತೆ ಹಲವು ಗೌರವಗಳು ಲಭಿಸಿದ್ದು ಇವರ ಕನ್ನಡ ಹೋರಾಟದಿಂದ ಬೇಲೂರಿನ ವಾಟಾಳ್ ಎಂದೇ ಪ್ರಸಿದ್ಧರಾಗಿದ್ದಾರೆ.
ಈ ಬಗ್ಗೆ ತೀರ್ಥಂಕರ್ ಮಾತನಾಡಿ, ಜನರಲ್ಲಿ ಕನ್ನಡಾಭಿಮಾನ ತುಂಬುವ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು, ಹಳದಿ ಮಿಶ್ರಿತ ವಸ್ತುಗಳನ್ನು ತಯಾರು ಮಾಡುತ್ತೇನೆ. ಅಲ್ಲದೆ ತಾವು ಉಪಯೋಗಿಸುವ ಸ್ಕೂಟರ್ ಕೂಡ ಕೆಂಪು, ಹಳದಿ ಮಿಶ್ರಿತ ಬಣ್ಣವನ್ನು ಹೊಂದಿದ್ದು ಇದಕ್ಕಾಗಿ ಕಂಪನಿಗೆ ಮನವಿ ಮಾಡಿದ್ದೆ. ಚನ್ನಕೇಶವ ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಅಂಗಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿರುವುದನ್ನು ಕಂಡು ಸಾರ್ಥಕವಾಗಿದೆ ಎಂದು ಹೆಮ್ಮೆ ಪಡುತ್ತಾರೆ.;Resize=(128,128))
;Resize=(128,128))
;Resize=(128,128))
;Resize=(128,128))