ಟಿಎಲ್‌ಬಿಸಿ ಅಕ್ರಮ ನೀರಾವರಿ ತಡೆಗೆ ಆಗ್ರಹ

| Published : Oct 16 2024, 12:48 AM IST

ಸಾರಾಂಶ

TLBC demands to stop illegal irrigation

ಕನ್ನಡಪ್ರಭ ವಾರ್ತೆ ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಯ 89 /5 ರಲ್ಲಿ ಅನಧಿಕೃತ ಪಂಪ್ ಸೆಟ್ ಗಳ ಮೂಲಕ ಅಕ್ರಮವಾಗಿ ನೀರಾವರಿ ಮಾಡುತ್ತಿದ್ದು, ಇದನ್ನು ತಡೆಯಲು ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತ ನಿಯೋಗವು ಉಪ ತಹಸೀಲ್ದಾರ್‌ ವಿನಾಯಕ ರಾವ್ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಈ ಅಕ್ರಮ ನೀರಾವರಿಯಿಂದಾಗಿ ತಾಲೂಕಿನ ನೀರಮಾನ್ವಿ ಹೋಬಳಿಯ ಜಮೀನಿಗೆ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿರುವವರ ಕೆಳ ಭಾಗದ ರೈತರ ಜಮೀನುಗಳಿಗೆ ನೀರು ದೊರೆಯುತ್ತಿಲ್ಲ. ಇದರಿಂದ ರೈತರು ಬೆಳೆದ ಭತ್ತ ಜೋಳ ಹಾಗೂ ಹತ್ತಿ ತೊಗರಿ ಸೇರಿದಂತೆ ವಿವಿಧ ಬೆಳೆಗಳ ಒಣಗುತ್ತಿವೆ. ತಾಲೂಕು ಆಡಳಿತ ಹಾಗೂ ನೀರವಾರಿ ಇಲಾಖೆಯ ಅಧಿಕಾರಿಗಳು ಕೂಡಲೇ ಅಕ್ರಮ ಪಂಪ್‌ ಸೆಟ್‌ ಗಳನ್ನು ತೆರವುಗೊಳಿಸಿ ಕ್ರಮಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನೀರಮಾನ್ವಿ ಗ್ರಾಮದ ರೈತ ಮುಖಂಡರಾದ ಜೆಲ್ಲಿ ಆಂಜನೇಯ್ಯ ನಾಯಕ, ಅರಿಕೇರಿ ರಾಮಣ್ಣ ಶ್ರೀರಾಮ ಬಂದೇನವಾಜ್ ಬುಡ್ಡಸಾಬ್, ರಾಮನಗೌಡ, ವೀರಣಗೌಡ, ಸಿದ್ದಯ್ಯ ಚಾಗಿ, ಅನರಿ ರಾಮಣ್ಣ, ಮಲ್ಲಿಕಾರ್ಜುನ, ಶರಣಬಸವ, ನವೀನ್, ಶ್ರೀನಿವಾಸ, ಮಲ್ಲಪ್ಪ ಪೂಜಾರಿ, ಶೇಖರಪ್ಪ ಸೇರಿದಂತೆ ನೂರಾರು ರೈತರು ಹಾಜರಿದ್ದರು.

-------------------

14ಕೆಪಿಎಂಎನ್ವಿ01: ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತ ನಿಯೋಗವು ಉಪತಹಶೀಲ್ದಾರ್ ವಿನಾಯಕ ರಾವ್ ಅವರಿಗೆ ಮನವಿ ಸಲ್ಲಿಸಿತು.