ಕಲೆಗಳನ್ನು ಅನುಭವಿಸಲು ರಸಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕು: ರಂಗ ಪೈ

| Published : Mar 26 2024, 01:18 AM IST

ಕಲೆಗಳನ್ನು ಅನುಭವಿಸಲು ರಸಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕು: ರಂಗ ಪೈ
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಸಂಗೀತ ಮತ್ತು ನೃತ್ಯ ತರಗತಿಗಳನ್ನು ಉದ್ಘಾಟಿಸಲಾಯಿತು. ಮೇ 21ರ ವರೆಗೆ ಪ್ರತಿ ಸೋಮವಾರ ಸಂಜೆ ನೃತ್ಯ ತರಗತಿಗಳು ಮತ್ತು ಗುರುವಾರ ಸಂಗೀತ ತರಗತಿಗಳು ನಡೆಯಲಿವೆ. ತರಗತಿಗಳು ಉಚಿತವಾಗಿದ್ದು, ಎಲ್ಲರಿಗೂ ಮುಕ್ತ ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲಸಂಗೀತ ಮತ್ತು ನೃತ್ಯದಂತಹ ವಿಭಿನ್ನ ಕಲಾ ಪ್ರಕಾರಗಳನ್ನು ಸಂಪೂರ್ಣವಾಗಿ ಅನುಭವಿಸಲು ರಸ ಸಿದ್ಧಾಂತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಂಗೀತ ಕಲಾವಿದ ಟಿ. ರಂಗ ಪೈ ಹೇಳಿದರು.ಅವರು ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಆಯೋಜಿಸಲಾಗುತ್ತಿರುವ ಸಂಗೀತ ಮತ್ತು ನೃತ್ಯ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.ಅವರು ಶೃಂಗಾರ, ಕರುಣ, ವೀರ ಇತ್ಯಾದಿ ನವ ರಸಗಳು ಕಲೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.ಡಾ. ಟಿ.ಎಂ.ಎ. ಪೈ ಅವರು ಮಣಿಪಾಲದಲ್ಲಿ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ಪ್ರಾರಂಭಿಸುವಾಗ ಅಕಾಡೆಮಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಫೈನ್ ಆರ್ಟ್ಸ್ ಬಗ್ಗೆಯೂ ಯೋಚಿಸಿದ್ದರು. ಅವರು ಜೀವನದಲ್ಲಿ ಕಲೆಗಳ ಮಹತ್ವವನ್ನು ಸಂಪೂರ್ಣವಾಗಿ ತಿಳಿದಿದ್ದರು. ಜಿಸಿಪಿಎಎಸ್‌ನ ಈ ಪ್ರಯತ್ನವು ಅದರ ಉದ್ದೇಶದಲ್ಲಿ ಯಶಸ್ವಿಯಾಗಲಿ ಎಂದು ರಂಗ ಪೈ ಹಾರೈಸಿದರು.ಮಾಹೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಡಾ.ಶೋಭಾ ಕಾಮತ್ ಅವರು ಕ್ಯಾಂಪಸ್ ಜೀವನದಲ್ಲಿ ಎಲ್ಲ ಕಲೆಗಳ ಅಗತ್ಯವನ್ನು ಒತ್ತಿ ಹೇಳಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಕಲೆಯ ಸಂಪೂರ್ಣ ಸೌಂದರ್ಯಾನುಭೂತಿಗೆ ನಿಜವಾದ ಕಲಾ ಕಲಿಕೆಯ ಅಗತ್ಯವನ್ನು ವಿವರಿಸಿದರು.ನೃತ್ಯ ತರಬೇತಿ ನೀಡುವ ವಿದುಷಿ ಡಾ. ಭ್ರಮರಿ ಶಿವಪ್ರಕಾಶ್ ಅವರು ನೃತ್ಯವು ಇಡೀ ದೇಹ ಮತ್ತು ಮನಸ್ಸನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ವಿವರಿಸಿದರು.ಸಂಗೀತ ತರಗತಿಗಳನ್ನು ನಡೆಸುವ ಕಲಾವಿದೆ ಶ್ರಾವ್ಯ ಬಾಸ್ರಿ, ಸಂಗೀತವು ಸೌಂದರ್ಯದ ಅನುಭವಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ವಿವರಿಸಿದರು. ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು.ಮೇ 21ರ ವರೆಗೆ ಪ್ರತಿ ಸೋಮವಾರ ಸಂಜೆ ನೃತ್ಯ ತರಗತಿಗಳು ಮತ್ತು ಗುರುವಾರ ಸಂಗೀತ ತರಗತಿಗಳು ನಡೆಯಲಿವೆ. ತರಗತಿಗಳು ಉಚಿತವಾಗಿದ್ದು, ಎಲ್ಲರಿಗೂ ಮುಕ್ತ ಅವಕಾಶವಿದೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.