ಸಾರಾಂಶ
ಉರುಳು ಸೇವೆ ಮಾಡುವ ಭಕ್ತಾದಿಗಳಿಗೆ ಬಿಸಿಲಿನ ತಾಪಮಾನ ತಡೆಯಲು ದೇವಾಲಯದ ಸುತ್ತಲೂ ಶಾಖ ನಿರೋಧಕ ಬಿಳಿ ಬಣ್ಣ ಬಳಿಯುವ ಮೂಲಕ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅನುಕೂಲ ಕಲ್ಪಿಸಿದೆ.
ಕನ್ನಡಪ್ರಭ ವಾರ್ತೆ ಹನೂರು
ಉರುಳು ಸೇವೆ ಮಾಡುವ ಭಕ್ತಾದಿಗಳಿಗೆ ಬಿಸಿಲಿನ ತಾಪಮಾನ ತಡೆಯಲು ದೇವಾಲಯದ ಸುತ್ತಲೂ ಶಾಖ ನಿರೋಧಕ ಬಿಳಿ ಬಣ್ಣ ಬಳಿಯುವ ಮೂಲಕ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅನುಕೂಲ ಕಲ್ಪಿಸಿದೆ.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ನಾನಾ ಭಾಗಗಳಿಂದ ಮಲೆ ಮಹದೇಶ್ವರನ ದೇವಾಲಯಕ್ಕೆ ಹರಕೆ ಹೊತ್ತು ಬರುವ ಭಕ್ತಾದಿಗಳು ಉರುಳು ಸೇವೆ ಮಾಡುವ ಸಂದರ್ಭದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ತೊಂದರೆಯಾಗುವುದನ್ನು ತಪ್ಪಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 12 ಅಡಿ ಅಗಲದ ಶಾಖ ನಿರೋಧಕ ಬಣ್ಣ ಬಳಿಯಲಾಗಿದೆ. ಮೆಚ್ಚುಗೆ ವ್ಯಕ್ತಪಡಿಸಿದ ಭಕ್ತಾದಿಗಳು:
ಮಲೆ ಮಾದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತು ಬರುವ ಭಕ್ತರು ದೇವಾಲಯದ ಸುತ್ತಲೂ ಇರುವ ಡಾಂಬರು ರಸ್ತೆಯಲ್ಲಿಯೇ ಬಿಸಿಲು ಮಳೆ ಎನ್ನದೆ ಉರುಳು ಸೇವೆ ಮಾಡುವ ಮೂಲಕ ಮಾದಪ್ಪನಿಗೆ ಹರಕೆ ತೀರಿಸುತ್ತಿದ್ದರು. ಇದನ್ನು ಮನಗಂಡ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಭಕ್ತಾದಿಗಳಿಗೆ ಬಿಸಿಲಿನ ತಾಪದಿಂದ ಉರುಳು ಸೇವೆ ಮಾಡುವ ಸಂದರ್ಭದಲ್ಲಿ ಆಗುತ್ತಿದ್ದ ತೊಂದರೆ ತಪ್ಪಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯದ ಸುತ್ತಲೂ ಬಿಸಿಲಿನ ತಾಪಮಾನ ತಡೆಯುವ ನಿಟ್ಟಿನಲ್ಲಿ ಶಾಖ ನಿರೋಧಕ ಬಿಳಿ ಬಣ್ಣ ಬಳಿಯುವ ಮೂಲಕ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿದೆ.