ಸಾರಾಂಶ
ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ, ಚಟ್ನಳ್ಳಿ, ತಡಪಳ್ಳಿ, ಶೇಖಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ದೇಶದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈಯನ್ನು ಮತ್ತೊಮ್ಮೆ ಬಲ ಪಡಿಸಬೇಕು. ಈ ನಿಟ್ಟಿನಲ್ಲಿ ಶ್ರಮಿಸುವ ಮೂಲಕ ನಮ್ಮ ಬೀದರ್ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಗೆಲ್ಲಿಸಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ಅವರು ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ, ಚಟ್ನಳ್ಳಿ, ತಡಪಳ್ಳಿ, ಶೇಖಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ನಡೆದ ಮತಯಾಚನೆಯಲ್ಲಿ ಮಾತನಾಡಿ, ಸರ್ವ ಶ್ರೇಷ್ಠ ಭಾರತಕ್ಕಾಗಿ ಮೊತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಜನತೆ ಮುಂದಾಗಬೇಕು ಎಂದರು.
ರಾಷ್ಟ್ರದ ಪ್ರಗತಿ, ಅಭಿವೃದ್ಧಿಗಾಗಿ, ಮತ್ತೊಮ್ಮೆ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಬಿಜೆಪಿಗೆ ಮತನೀಡಬೇಕು. ಲೋಕಸಭಾ ಚುನಾವಣೆ ಈ ದೇಶದ ಭವಿಷ್ಯ ನಿರ್ಧರಿಸುತ್ತದೆ. ನಮ್ಮ ಗುರಿ ಮಾತ್ರ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವುದು ಆಗಿರಲಿ. ಪ್ರತಿಯೊಬ್ಬ ಕಾರ್ಯಕರ್ತನು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.ಈ ಸಂದರ್ಭದಲ್ಲಿ ಪೀರಪ್ಪ ಯರನಳ್ಳಿ, ಬಾಬುರಾವ ಮಲ್ಕಾಪುರೆ, ಸುರೇಶ್ ಮಾಶೆಟ್ಟಿ, ಘಾಳೆಪ್ಪ ಚಟ್ನಳ್ಳಿ, ನಾಗಭೂಷಣ ಕಮಠಾಣಾ, ಚಂದ್ರಶೇಖರ ಪಾಟೀಲ, ಜೋಸೆಫ್ ಕೊಡ್ಡೆಕರ್, ಪ್ರಶಾಂತ್ ಸಿಂದೋಲ, ಶಿವಕುಮಾರ ಅಷ್ಟೂರ, ಶಿವಕಾಂತ ಶೇಖಾಪುರ, ಬಸವರಾಜ ಪವಾರ್, ಮತ್ತಿತರರು ಉಪಸ್ಥಿತರಿದ್ದರು.