ಶ್ರೀ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲು ನ್ಯಾ. ರಾಹುಲ್ ಶೆಟ್ಟಿಗಾರ್ ಕರೆ

| Published : Jan 18 2025, 12:47 AM IST

ಶ್ರೀ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲು ನ್ಯಾ. ರಾಹುಲ್ ಶೆಟ್ಟಿಗಾರ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಇಂದಿನ ದಿನಗಳಲ್ಲಿ ಯುವಕರು ಶ್ರೀ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಇಂದಿನ ದಿನಗಳಲ್ಲಿ ಯುವಕರು ಶ್ರೀ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ತಿಳಿಸಿದ್ದಾರೆ.

ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ, ಪಾಲಿಟೆಕ್ನಿಕ್ ಕಾಲೇಜ್ ಬಾವಿಕೆರೆ ಇವರ ಆಶ್ರಯದಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಾವು ಸಮಾಜಕ್ಕೆ ಏನು ಕೊಡಬೇಕು, ಸಮಾಜ ನಮಗೆ ಏನು ಕೊಟ್ಟಿದೆ ಎಂದು ಯೋಚಿಸಬೇಕು. ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಘೋಷಣೆ ಶ್ರೀ ವಿವೇಕಾನಂದರ ವಾಣಿ ಅದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಿ ಶೇಖರ್ ನಾಯ್ಕ ಮಾತನಾಡಿ ಶ್ರೀ ವಿವೇಕಾನಂದರು ಯುವಕರನ್ನು ಬಡಿದೆಬ್ಬಿಸಿ, ಮುಂದಿನ ಜೀವನದಲ್ಲಿ ತಮ್ಮ ಗಟ್ಟಿ ನಿರ್ಧಾರದಿಂದ ಸಾಧನೆಗೈಯ ಬೇಕು ಎಂದರು. ಹಿರಿಯ ವಕೀಲ ಎಸ್ ಸುರೇಶ್ ಚಂದ್ರ ಮಾತನಾಡಿ ಯುವಕರು ದುರಭ್ಯಾಸದಿಂದ ದೂರವಿದ್ದು ವಿವೇಕಾನಂದರ ಗುಣ ವನ್ನು ರೂಢಿಸಿಕೊಳ್ಳಬೇಕು. 2017ರ ನಂತರ ಶ್ರೀ ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ಸಪ್ತಾಹ ವನ್ನು ಪ್ರತಿ ಜ.12ರಂದು ಆಚರಿಸಲಾಗುತ್ತಿದೆ. ಶ್ರೀ ಸ್ವಾಮಿ ವಿವೇಕಾನಂದರು ಸರ್ವಧರ್ಮದ ಚಿಂತಕರು ಮತ್ತು ಒಳ್ಳೆಯ ಸಂತರು ಎಂದು ಹೇಳಿದರು.ಲಕ್ಕವಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್ ಮಾತನಾಡಿ ಯುವಕರು ಮೊಬೈಲ್‌ ಬಳಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಕಾರಣ ಇಂದು ಸೈಬರ್ ಕ್ರೈಮ್‌ ಗಳು ಹೆಚ್ಚುತ್ತಿವೆ ಹಾಗಾಗಿ ತಾವುಗಳು ಜಾಗೃತರಾಗಬೇಕು ಎಂದು ತಿಳಿಸಿದರು.ಹಿರಿಯ ವಕೀಲ ಎಂ. ಕೆ. ತೇಜುಮೂರ್ತಿ ಯುವಕರ ಜವಾಬ್ದಾರಿ ಮತ್ತು ಹಕ್ಕುಗಳು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಮಮತಾ, ಶಶಿಧರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.17ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಬಾವಿಕೆರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶರಾದ ರಾಹುಲ್ ಶೆಟ್ಟಿಗಾರ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ, ಹಿರಿಯ ವಕೀಲ ಎಸ್.ಸುರೇಶ್ ಚಂದ್ರ, ವಕೀಲ ಎಂ.ಕೆ.ತೇಜುಮೂರ್ತಿ ಮತ್ತಿತರರು ಇದ್ದರು.