ತಾಲೂಕಿನ ಜಿ ಹೊಸಹಳ್ಳಿ ಗ್ರಾಮದ ಕನ್ನಡ ಯುವಕ ಸಂಘ ವತಿಯಿಂದ 29ನೇ ವರ್ಷದ ಶ್ರೀ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಿ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಯುವಕ ಸಂಘದ ಅಧ್ಯಕ್ಷ ಎಚ್.ಬಿ. ನರೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಜಿ ಹೊಸಹಳ್ಳಿ ಗ್ರಾಮದ ಕನ್ನಡ ಯುವಕ ಸಂಘ ವತಿಯಿಂದ 29ನೇ ವರ್ಷದ ಶ್ರೀ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಿ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಯುವಕ ಸಂಘದ ಅಧ್ಯಕ್ಷ ಎಚ್.ಬಿ. ನರೇಶ್ ತಿಳಿಸಿದ್ದಾರೆ.ಡಿಸೆಂಬರ್ 11ರಂದು ಗುರುವಾರ ಸಂಜೆ ಐದು ಗಂಟೆಗೆ ಸರಿಯಾಗಿ ಹಿಂದೂ ಮಹಾಗಣಪತಿ ಸಮೇತ ಬೆಂಗಳೂರಿನ ಅಣ್ಣಮ್ಮದೇವಿ, ಹಂಗರನಹಳ್ಳಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ, ಹೆತ್ತೇನಹಳ್ಳಿ ಮಾರಮ್ಮ, ಜಿ.ಹೊಸಹಳ್ಳಿ ಶ್ರೀವೀರಭದ್ರಸ್ವಾಮಿ, ಶ್ರೀಆಂಜನೇಯಸ್ವಾಮಿ, ಸಿದ್ದರಬೆಟ್ಟ ಶ್ರೀಸಿದ್ದೇಶ್ವರಸ್ವಾಮಿ, ಹಾಗಲವಾಡಿ ಶ್ರೀಕರಿಯಮ್ಮದೇವಿ, ಹಾಗಲವಾಡಿ ಕೊಲ್ಲಾಪುರದಮ್ಮದೇವಿ, ಹಂಗರನಹಳ್ಳಿ ಚಿಕ್ಕಚೌಡೇಶ್ವರಿ ಅಮ್ಮ, ಕವಣಾಪುರ ಶ್ರೀ ಮುದ್ದು ಮಹದೇಶ್ವರಸ್ವಾಮಿ ದೇವರುಗಳ ಅದ್ಧೂರಿ ಉತ್ಸವ ಇರುತ್ತದೆ.

ಡಿ.11 ಸಂಜೆ 9 ಗಂಟೆಗೆ ಅಪ್ಪು ಮೆಲೋಡಿಸ್ ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ದಿನ 7 ಗಂಟೆಗೆ ಅನ್ನದಾಸೋಹ ವ್ಯವಸ್ಥೆಯನ್ನು ಏರ್ಪಡಿಸಲಾಗುತ್ತದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಜಲ ಶಕ್ತಿ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಶಾಸಕ ಎಸ್.ಆರ್. ಶ್ರೀನಿವಾಸ್ ವಹಿಸಿಕೊಳ್ಳುವರು, ಮುಖ್ಯ ಅತಿಥಿಯಾಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಜಿ.ಚಂದ್ರಶೇಖರ್ ಹಾಗೂ ವಿವಿಧ ಮುಖಂಡರುಗಳು ಭಾಗವಹಿಸುವರು.ಡಿ.12 ರಂದು ಬೆಳಿಗ್ಗೆ 8 ಗಂಟೆಗೆ ಮಹಾಮಂಗಳಾರತಿ ನಂತರ ಜಿ.ಹೊಸಹಳ್ಳಿ ಕೆರೆಗೆ ಬಾಗಿನ, ತೆಪ್ಪೋತ್ಸವ ಮತ್ತು ಗಂಗಾಪೂಜೆಯೊಂದಿಗೆ ಶ್ರೀಹಿಂದೂ ಮಹಾಗಣಪತಿಸ್ವಾಮಿಯವರನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.