ಇಂದು ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ

| Published : May 01 2024, 01:17 AM IST

ಇಂದು ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಆದಿಚುಂಚನಗಿರಿ ಶಾಖಾಮಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದವು.

ತಿಪಟೂರು: ತಾಲೂಕಿನ ಆದಿಚುಂಚನಗಿರಿ ಶಾಖಾಮಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದವು.ಅಮ್ಮನವರಿಗೆ ಅಭಿಷೇಕ, ಸಹಸ್ರನಾಮ ಅರ್ಚನೆ, ಪೂಜೆ, ಮಹಾಮಂಗಳಾರತಿ, ಮಧುವಣಗಿತ್ತಿ ಶಾಸ್ತ್ರ, ಕಳಸ ಸ್ಥಾಪನೆ, ಪ್ರಥಮ ಶಾಸ್ತ್ರ ಹಾಗೂ ಅಮ್ಮನವರ ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ದೀಪಾರಾಧನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದಿದವು. ಬುಧವಾರ ಗ್ರಾಮದ ರಾಜಬೀದಿಗಳಲ್ಲಿ ಚೌಡೇಶ್ವರಿ ದೇವಿಯವರ ಕುದುರೆ ಉತ್ಸವ ಹಾಗೂ ರಾತ್ರಿ 8 ಗಂಟೆಗೆ ಚೌಡೇಶ್ವರಿ ಅಮ್ಮನವರ ರಥೋತ್ಸವವು ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭರತನಾಟ್ಯ ಏರ್ಪಡಿಸಲಾಗಿದೆ. ಮೇ. 2ರಂದು ಅಮ್ಮನವರ ಸಿಡಿ ಮಹೋತ್ಸವವು ನಡೆಯಲಿದೆ ಎಂದು ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.