ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರತಾಲೂಕಿನ ಹಿಂದೂ ಮಹಾ ಗಣಪತಿ ವಿಸರ್ಜನೆ ಸೆ.29 ಭಾನುವಾರ ನಡೆಯಲಿದ್ದು, ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾ ಗಣಪತಿ ಟ್ರಸ್ಟ್ ಅಧ್ಯಕ್ಷ ಬಸವನಗೌಡ ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನೇಯ ದೇವಸ್ಥಾನದ ಆವರಣದಿಂದ ಬೆಳಗ್ಗೆ 10ಕ್ಕೆ ಆರಂಭವಾಗುವ ಶೋಭಾ ಯಾತ್ರೆಯಲ್ಲಿ ಸುಮಾರು ಇಪ್ಪತೈದು ಸಾವಿರಕ್ಕೂ ಅಧಿಕ ಜನ ಆಗಮಿಸುವ ನೀರಿಕ್ಷೆಯಿದೆ ಎಂದು ತಿಳಿಸಿದರು.ಮೆರವಣಿಗೆಗೆ ವಿವಿಧ ಕಲಾತಂಡಗಳಿಂದ ಹಾಗೂ ಮೂರು ಡಿಜೆ ಸೌಂಡ್ ಸಿಸ್ಟಮ್‍ಗಳ ವ್ಯವಸ್ಥೆ ಮಾಡಿದ್ದು, ಮಹಿಳೆಯರಿಗಾಗಿಯೇ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯು ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ, ಪಿ.ಬಿ ರಸ್ತೆಯ ಮೂಲಕ ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಮೂಲಕ ಪಕ್ಕಿರಸ್ವಾಮಿಮಠದವರೆಗೆ ತೆರಳಿ ಬಲ ರಸ್ತೆಯಿಂದ ಚನ್ನಮ್ಮ ವೃತ್ತಕ್ಕೆ ಆಗಮಿಸಿ, ದೇವಸ್ಥಾನ ರಸ್ತೆ, ಶಿಭಾರ ವೃತ್ತ, ಐಬಿ ರಸ್ತೆಯಿಂದ ಹಳೆ ಪಿಬಿ ರಸ್ತೆಯ ಮೂಲಕ ಸಾಗಿ, ತುಂಗಭದ್ರಾ ನದಿಯಲ್ಲಿ ರಾತ್ರಿ ವಿಸರ್ಜನೆ ಮಾಡಲಾಗುವುದು ಎಂದರು.ತಾಲೂಕಿನ ವಿವಿಧ ಮಠಾಧೀಶರು, ಸೇರಿದಂತೆ ರಾಜಕೀಯ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಗರದ ಗಣ್ಯ ವರ್ತಕರು, ಸಂಘ ಸಂಸ್ಥೆಗಳಿಂದ ನಗರದ ವಿವಿದೆಡೆ ಪ್ರಸಾದ ವ್ಯವಸ್ಥೆ ಏರ್ಪಡಿಸಿದೆ.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಎಚ್. ದಿನೇಶ್, ಹಿಂದೂ ಮಹಾ ಗಣಪತಿ ಸಮಿತಿಯ ರಾಘವೇಂದ್ರ ಉಪಾಧ್ಯಾಯ, ಸ್ವಾತಿ ಹನುಮಂತ, ರಟ್ಟಿಹಳ್ಳಿ ಮಂಜುನಾಥ್, ಸಂತೋಷ್ ಗುಡಿಮನಿ, ಚಂದ್ರಕಾಂತ ಗೌಡ, ಅನಂದ್‍ಕುಮಾರ್, ನಿತ್ಯಾನಂದ, ಸುನಾಮಿ ರಮೇಶ್, ಕಾರ್ತಿಕ್ ಹಾಗೂ ಇತರರು ಉಪಸ್ಥಿತರಿದ್ದರು.