ಸಾರಾಂಶ
ಕಾಂಗ್ರೆಸ್ ಮುಖಂಡ ಎಂ. ಟಿ. ಕೃಷ್ಣೇಗೌಡ ಅಭಿಮಾನಿ ಬಳಗದಿಂದ ಕೃಷ್ಣೇಗೌಡರ ಹುಟ್ಟುಹಬ್ಬವನ್ನು ಏ. 20ರಂದು ಸಂಜೆ ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವುದಾಗಿ ಅಭಿಮಾನಿ ಬಳಗದ ಮುಖಂಡ ಕೆ.ಟಿ.ರವೀಂದ್ರ ಕುಮಾರ್ ತಿಳಿಸಿದರು. ದ್ವಿತೀಯ ಪಿಯು ತರಗತಿಯಲ್ಲಿ ಶೇ. 95ಕ್ಕಿಂತ ಹೆಚ್ಚಿನ ಅಂಕ ಪಡೆದ ಸುಮಾರು 20 ಮಂದಿ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ, ಪೌರಕಾರ್ಮಿಕರ ಸೇವೆ ಸ್ಮರಿಸಿ ಸುಮಾರು 40 ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಅರಕಲಗೂಡು ಮೂಲದ ವಿಜ್ಞಾನಿ ಡಾ. ಕೋಮಲ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ. ಬಿ. ಚನ್ನಕೇಶವ ಅವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದು ಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಕಾಂಗ್ರೆಸ್ ಮುಖಂಡ ಎಂ. ಟಿ. ಕೃಷ್ಣೇಗೌಡ ಅಭಿಮಾನಿ ಬಳಗದಿಂದ ಕೃಷ್ಣೇಗೌಡರ ಹುಟ್ಟುಹಬ್ಬವನ್ನು ಏ. 20ರಂದು ಸಂಜೆ ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವುದಾಗಿ ಅಭಿಮಾನಿ ಬಳಗದ ಮುಖಂಡ ಕೆ.ಟಿ.ರವೀಂದ್ರ ಕುಮಾರ್ ತಿಳಿಸಿದರು.ಅಭಿಮಾನಿಗಳ ಬಳಗ ವತಿಯಿಂದ ಪ್ರತಿವರ್ಷವೂ ಕೃಷ್ಣೇಗೌಡರ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ಆಯೋಜನೆ ಮಾಡುತ್ತಾ ಬಂದಿದ್ದು, ಈ ಬಾರಿ ಮತ್ತಷ್ಟು ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ತರಗತಿಯಲ್ಲಿ ಶೇ. 95ಕ್ಕಿಂತ ಹೆಚ್ಚಿನ ಅಂಕ ಪಡೆದ ಸುಮಾರು 20 ಮಂದಿ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ, ಪೌರಕಾರ್ಮಿಕರ ಸೇವೆ ಸ್ಮರಿಸಿ ಸುಮಾರು 40 ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಅರಕಲಗೂಡು ಮೂಲದ ವಿಜ್ಞಾನಿ ಡಾ. ಕೋಮಲ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ. ಬಿ. ಚನ್ನಕೇಶವ ಅವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದು ಗೋಷ್ಠಿಯಲ್ಲಿ ತಿಳಿಸಿದರು.ಮುಖಂಡರಾದ ರಾಮೇಗೌಡ, ಎ.ಸಿ.ದೇವರಾಜೇಗೌಡ, ಲೋಕೇಶ್, ಕಾಂತರಾಜ್, ಅಮ್ಜು, ವಕೀಲ ರಾಜಶೇಖರ್ ಗೋಷ್ಠಿಯಲ್ಲಿದ್ದರು.