ಇಂದು ‘ಸಂಕರ್ಷಣ ಉತ್ಸವ’

| Published : Feb 09 2025, 01:18 AM IST

ಸಾರಾಂಶ

ನಗರದ ಎಸ್‍ಜೆವಿಪಿ ಕಾಲೇಜು ಆವರಣದಲ್ಲಿ ಫೆ.9ರಂದು ಸಂಜೆ 5.30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಕರ್ಷಣ ನೃತ್ಯಾಲಯದಿಂದ ‘ಸಂಕರ್ಷಣ ಉತ್ಸವ’ ಶ್ರೀಕೃಷ್ಣ ವೈಭವ ಕಾರ್ಯಕ್ರಮ ಆಯೋಜಿಸಿದೆ ಎಂದು ನೃತ್ಯಾಲಯ ಮುಖ್ಯಸ್ಥೆ ಹಾಗೂ ನೃತ್ಯಗುರು ವಿದುಷಿ ರಾಧಾ ಭಾಸ್ಕರ್ ಹರಿಹರದಲ್ಲಿ ಹೇಳಿದರು.

ಹರಿಹರ: ನಗರದ ಎಸ್‍ಜೆವಿಪಿ ಕಾಲೇಜು ಆವರಣದಲ್ಲಿ ಫೆ.9ರಂದು ಸಂಜೆ 5.30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಕರ್ಷಣ ನೃತ್ಯಾಲಯದಿಂದ ‘ಸಂಕರ್ಷಣ ಉತ್ಸವ’ ಶ್ರೀಕೃಷ್ಣ ವೈಭವ ಕಾರ್ಯಕ್ರಮ ಆಯೋಜಿಸಿದೆ ಎಂದು ನೃತ್ಯಾಲಯ ಮುಖ್ಯಸ್ಥೆ ಹಾಗೂ ನೃತ್ಯಗುರು ವಿದುಷಿ ರಾಧಾ ಭಾಸ್ಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದುಷಿ ರಾಧಾ ಭಾಸ್ಕರ್ ಅಧ್ಯಕ್ಷತೆ ವಹಿಸುವರು. ನಗರಸಭೆ ಸದಸ್ಯ ಶಂಕರ ಖಟಾವ್‍ಕರ್, ತಪೋವನ ಸಮೂಹ ಸಂಸ್ಥೆ ಮುಖ್ಯಸ್ಥ ಶಶಿಕುಮಾರ್ ಮೆಹರ್ವಾಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಎಸ್‍ಜೆಪಿವಿವಿ ಸಂಸ್ಥೆ ಕಾರ್ಯದರ್ಶಿ ಆರ್.ಟಿ. ಪ್ರಶಾಂತ ದುಗ್ಗತ್ತಿಮಠ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಸಾಧಕರಾದ ಪ್ರೇರಣಾ ಫೌಂಡೇಷನ್ ಅಧ್ಯಕ್ಷರಾದ ಉಷಾ ಮಂಜುನಾಥ, ಅನನ್ಯ ಎಚ್.ನಿಜಗುಣ, ಅಶ್ರೀತಾ ನಾಗರಾಜ, ಸಂಜನಾ ಮಹೇಶ್, ಶ್ರೇಯ ಮಲ್ಲೇಶ್, ಸಂಜನ ರಮೇಶ್ ಅವರನ್ನು ಸತ್ಕರಿಸಲಾಗುವುದು ಎಂದರು.

ಸಂಕರ್ಷಣ ನೃತ್ಯಾಲಯದ ಕಾರ್ಯದರ್ಶಿ ಎಸ್.ಡಿ. ರಜನಿ ಮಾತನಾಡಿ, ಕಾರ್ಯಕ್ರಮದಲ್ಲಿ ನವಿಲು ನೃತ್ಯ, ಕೃಷ್ಣನ ಕಾಡುವ ನೃತ್ಯ, ಕಾಳಿಂಗ ನರ್ತನ, ವಿಷ್ಣುವಿನ ಅವತಾರ ಸೇರಿದಂತೆ ವಿವಿಧ ರೂಪಕಗಳನ್ನು ನೃತ್ಯಾಲಯದ 160 ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೃತ್ಯ ವಿದ್ಯಾರ್ಥಿನಿಯರಾದ ಅಶ್ರೀತಾ ನಾಗರಾಜ, ಅನನ್ಯ ಎಚ್.ನಿಜಗುಣ, ಸಂಜನಾ ಮಹೇಶ್, ಶ್ರೇಯಾ ಎಂ.ವೈ. ಇದ್ದರು.

- - - -07ಎಚ್‍ಆರ್‍ಆರ್05.ಜೆಪಿಜಿ:

ಹರಿಹರದಲ್ಲಿ ಸಂಕರ್ಷಣ ನೃತ್ಯಾಲಯ ಮುಖ್ಯಸ್ಥೆ ವಿದುಷಿ ರಾಧಾ ಭಾಸ್ಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.