ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಜಿಲ್ಲೆಯ ಹಿರಿಯ, ಕಿರಿಯ ಸಂಗೀತ ಕಲಾವಿದರೆಲ್ಲರೂ ಕೂಡಿಕೊಂಡು ಗಾನಯೋಗಿ ಪುಟ್ಟರಾಜ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ ಸಮಾರಂಭವನ್ನು ನ. 23 ರಂದು ಪಟೇಲ್ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಅಂಗಳದಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದ ಅಣ್ಣಾರಾವ ಹೇಳಿದರು.ಪುಣ್ಯಾರಾಧನೆ ನಿಮಿತ್ತ ಡಾ. ಕಲ್ಲಯ್ಯ ಅಜ್ಜನವರ ತುಲಾಭಾರ ಹಾಗೂ ಸ್ವರ ನಮನ ಸಂಗೀತ ಸಮಾರಂಭ ನಡೆಯಲಿದೆ. ಅಂದು ಬೆಳಗಿನ 10 ಗಂಟೆಯಿಂದ ಧರ್ಮಸಭೆ ಹಾಗೂ ನುಡಿ ನಮನ ಸಮಾರಂಭ ನಡೆಯಲಿದ್ದು, ಅಂದೇ ಸಂಜೆ 4 ಗಂಟೆಯಿಂದ ಖ್ಯಾತ ಸಂಗೀತಗಾರರ ಸಂಗೀತ ಸಂಜೆ ನಡೆಯಲಿದೆ ಎಂದು ಕಲಾವಿದ ಅಣ್ಣಾರಾವ, ಬಂಡಯ್ಯ ಸುಂಟನೂರ್, ಸಿದ್ದರಾಮ ಪೊಲೀಸ್ ಪಾಟೀಲ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಂಗಧರ ದೇಶಿಕೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಗದಗ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರ ತುಲಾಭಾರ ನಡೆಯಲಿದ್ದು ಭಕ್ತರು, ರಾಜಕೀಯ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.ಸಮಾರಂಭದಲ್ಲಿ ಸಂಗೀತಾ ಕಟ್ಟಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಕೃಷ್ಣೇಂದ್ರ ವಾಡಕರ್, ವಿಶ್ವನಾಥ ಗವಾಯಿಗಳು, ಹುಚ್ಚಯ್ಯ ಗವಾಯಿಗಳು ಅವರೆಲ್ಲರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಅಂದೇ ಸಂಜೆ 4 ಗಂಟೆಯಿಂದ ಶುರುವಾಗುವ ಸ್ವರ ನಮನದಲ್ಲಿ ಕೊಳಲು ವಾದಕ ಪ್ರವೀಣ ಗೋಡ್ಕಂಡಿ, ಹಿಂದೂಸ್ಥಾನಿ ಸಂಗೀತದ ಕುಮಾರ ಮರಡೂರ್, ತಬಲಾ ತ್ರಿಗಲ್ ಬಂದಿ ಶಾಂತಲಿಂಗ ದೇಸಾಯಿ ಕಲ್ಲೂರ್, ಮಳೆ ಮಲ್ಲೇಶ, ರಘುನಂದನ ಗೋಪಾಲ್, ಸೀತಾರದಲ್ಲಿ ಭಾಗ್ಯಶ್ರೀ ಹೂಗಾರ್, ವೀರಭದ್ರಪ್ಪ ಬೆಣಕಲ್, ಜಡೇಶ ಹೂಗಾರ್ ತಬಲಾ, ರೇವಯ್ಯ ವಸ್ತ್ರದ ಮಠ ಹಾರ್ಮೋನಿಯಂ ಹೀಗೆ ಅನೇಕ ಕಲಾವಿದರು ಪಾಲ್ಗೊಂಡು ಸಂಗೀತ ಸಂಜೆ ಸ್ವರ ನಮನ ನಡೆಸುವ ಮೂಲಕ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಲಿದ್ದಾರೆ.ಕಲ್ಲಯ್ಯ ಅಜ್ಜನವರ ತುಲಾಭಾರದಲ್ಲಿ ಬಂಡಯ್ಯ ಶಾಸ್ತ್ರೀಗಳು, ಶರಣಯ್ಯ ಹಿರೇಮಠ, ಬಂಡಯ್ಯ ಹಿರೇಮಠ, ಸಂತೋಷ ನಂದರಗಿಮಠ ಹಾಗೂ ಕಲಬುರಗಿ ಕಲಾವಿದರೆಲ್ಲರೂ ಸೇರಿಕೊಂಡು ನೆರವೇರಿಸಲಿದ್ದಾರೆಂದು ಕಲಾವಿದರಾದ ಅಣ್ಣಾರಾವ ಹೇಳಿದ್ದಾರೆ. ಕಲಾವಿದರಾದ ಬಾಬೂರಾವ ಕೋಬಾಳ್, ದೇಸಾಯಿ ಕಲ್ಲೂರ್ ಸೇರಿದಂತೆ ಅನೇಕರಿದ್ದರು.
;Resize=(128,128))
;Resize=(128,128))
;Resize=(128,128))