ಈ ಶ್ರೀಆಂಜನೇಯ ಸ್ವಾಮಿ ದೇವಾಲಯ ಪಾಂಡವ ವಂಶದ ಕೊನೆಯ ರಾಜ ಪರಮ ಧಾರ್ಮಿಕಭಕ್ತ ಜನವೇಜಯ ಅವರಿಂದ ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ಹೋಮ, ಹವನ, ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಪೂಜಾ ಕೈಕಾರ್ಯಗಳು ಜರುಗಲಿವೆ. ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಅವರು ದೇವರ ಮೂರ್ತಿ ಹಾಗೂ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.
ಕನ್ನಡಪ್ರಭವಾರ್ತೆ ಕೊರಟಗೆರೆಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಜ.೨೫ ರ ಭಾನುವಾರ ಅದ್ಧೂರಿಯಾಗಿ ನಡೆಯಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಲಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಸಾವಿರಾರು ವರ್ಷ ಇತಿಹಾಸ ಇರುವ ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಬ್ರಹ್ಮರಥೋತ್ಸವ ಪ್ರಾರಂಭದ ಸಮಯದಲ್ಲಿ ಗರುಡ ದೇವನ ಆಗಮನವಾಗಿ ೩ ಬಾರಿ ಪ್ರದಕ್ಷಿಣೆ ಹಾಕುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾಯುತ್ತಿದ್ದಾರೆ.ಈ ಶ್ರೀಆಂಜನೇಯ ಸ್ವಾಮಿ ದೇವಾಲಯ ಪಾಂಡವ ವಂಶದ ಕೊನೆಯ ರಾಜ ಪರಮ ಧಾರ್ಮಿಕಭಕ್ತ ಜನವೇಜಯ ಅವರಿಂದ ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ಹೋಮ, ಹವನ, ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಪೂಜಾ ಕೈಕಾರ್ಯಗಳು ಜರುಗಲಿವೆ. ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಅವರು ದೇವರ ಮೂರ್ತಿ ಹಾಗೂ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.
ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕ್ಯಾಮೇನಹಳ್ಳಿ ಆಂಜಣೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇವರ ಜೊತೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಆಶೋಕ್, ಪಿ.ಎನ್.ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಂ ದರ್ಶನ ಪಡೆಯಲಿದ್ದಾರೆ.