ಸಾರಾಂಶ
ಮಲೆಬೆನ್ನೂರು ಸಮೀಪದ ಉಕ್ಕಡಗಾತ್ರಿ ಕ್ಷೇತ್ರದಲ್ಲಿ ಆ.23ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದಿಗೆಯ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ, ಬೆಳ್ಳಿ ಕಿರೀಟ ಧಾರಣೆ, ಸರ್ವಧರ್ಮ ಸಾಮೂಹಿಕ ವಿವಾಹ, ನೂತನ ವಧುಗಳಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.
- ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಭಾಗಿ - - - ಮಲೆಬೆನ್ನೂರು: ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಕ್ಷೇತ್ರದಲ್ಲಿ ಆ.23ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದಿಗೆಯ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ, ಬೆಳ್ಳಿ ಕಿರೀಟ ಧಾರಣೆ, ಸರ್ವಧರ್ಮ ಸಾಮೂಹಿಕ ವಿವಾಹ, ನೂತನ ವಧುಗಳಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.
ನಂದಿಗುಡಿ ಸಿದ್ದರಾಮೇಶ್ವರ ಸ್ವಾಮೀಜಿ, ಯಳನಾಡು ಸಂಸ್ಥಾನದ ಸಿದ್ದರಾಮ ದೇಶೀಕೇಂದ್ರ ಗುರುಗಳು, ಗೋಡೆಕೆರೆ ಮೃತ್ಯುಂಜಯ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ಬೆಳ್ಳೂಡಿ ನಿರಂಜನಾನಂದ ಪುರಿ ಸ್ವಾಮೀಜಿ, ಹರಪೀಠದ ವಚನಾನಂದ ಗುರುಗಳು, ತಮ್ಮಡಿಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಕೇದಿಗೆ ಪೀಠದ ಜಯಚಂದ್ರಶೇಖರ್ ಸ್ವಾಮೀಜಿ, ತುಮ್ಮಿನಕಟ್ಟೆ ಪ್ರಭುಲಿಂಗ ಗುರುಗಳು, ಬಸವಜ್ಞಾನ ಮಂದಿರದ ಡಾ ಮಾತೆ ಬಸವಾಂಜಲಿ ದೇವಿ, ಹಳೇಬೀಡು ಪುಷ್ಪಗಿರಿ ಪೀಠದ ಸೋಮಶೇಖರ ಸ್ವಾಮೀಜಿ, ತಿಪಟೂರು ಇಮ್ಮಡಿ ಕರಿಬಸವ ಸ್ವಾಮೀಜಿ, ರಟ್ಟಿಹಳ್ಳಿ ಪೀಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೇಮರೆಡ್ಡಿ ಪೀಠದ ವೇಮನಾನಂದ ಸ್ವಾಮೀಜಿ, ಪುಣ್ಯಕೋಟಿ ಪೀಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಯಲವಟ್ಟಿ ಯೋಗಾನಂದ ಸ್ವಾಮೀಜಿ ಮತ್ತಿತರೆ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಮಾಧುಸ್ವಾಮಿ, ಶಾಸಕ ಹರೀಶ್ ಹಾಗೂ ಮಾಜಿ ಶಾಸಕರು ಭಾಗವಹಿಸುವರು.
- - - -೨೨ಎಂಬಿಆರ್೨:ತುಂಗಭದ್ರಾ ನದಿಗೆ ಭಕ್ತರು ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ನೂತನ ದ್ವಾರ ಬಾಗಿಲು.