ಇಂದು ಏಳು ಮಕ್ಕಳ ತಾಯವ್ವನ ದೇವಸ್ಥಾನ ಜಾತ್ರಾ ಮಹೋತ್ಸವ

| Published : Oct 28 2025, 12:44 AM IST

ಇಂದು ಏಳು ಮಕ್ಕಳ ತಾಯವ್ವನ ದೇವಸ್ಥಾನ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಿಂದ ೫ ಕಿಲೋ ಮೀಟರ್ ಮುಂಡಗೋಡಕ್ಕೆ ಹೋಗುವ ದಾರಿ ಮಧ್ಯದಲ್ಲಿಯೇ ಇರುವ ಏಳು ಮಕ್ಕಳ ತಾಯವ್ವನ ದೇವಸ್ಥಾನದ ಜಾತ್ರಾ ಮಹೋತ್ಸವ ಅ. ೨೮ರಂದು ನಡೆಯಲಿದೆ.

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದಿಂದ ೫ ಕಿಲೋ ಮೀಟರ್ ಮುಂಡಗೋಡಕ್ಕೆ ಹೋಗುವ ದಾರಿ ಮಧ್ಯದಲ್ಲಿಯೇ ಇರುವ ಏಳು ಮಕ್ಕಳ ತಾಯವ್ವನ ದೇವಸ್ಥಾನದ ಜಾತ್ರಾ ಮಹೋತ್ಸವ ಅ. ೨೮ರಂದು ನಡೆಯಲಿದೆ.

ದೇವಸ್ಥಾನ ಸುತ್ತಲೂ ವಿಶಾಲವಾದ ಪ್ರದೇಶವಿದ್ದು, ಒಮ್ಮೆ ಬಂದರೆ ಗಿಡಮರಗಳು, ಶಾಂತವಾದ ವಾತಾವರಣ, ತಾಯವ್ವನ ಮುಂದೆ ನಮ್ಮ ಬೇಡಿಕೆಗಳನ್ನು ಹೇಳಿಕೊಂಡರೆ ಸಮಸ್ಯಗಳು ಈಡೇರುತ್ತವೆ ಎನ್ನುವದು ಭಕ್ತರಲ್ಲಿ ಮನದಲ್ಲಿದೆ.

ತಡಸದ ಗ್ರಾಮಸ್ಥರು ಸೇರಿ ತಾಯವ್ವ ದೇವಸ್ಥಾನ ಸೇವಾ ಸಮಿತಿ (೨೧ ಸದಸ್ಯರ) ಅಸ್ತಿತ್ವಕ್ಕೆ ಬಂದು ನಂತರ ದಿನದಲ್ಲಿ ಭಕ್ತ ಸಮೂಹ ದೊಡ್ಡದಾದಂತೆ ೯೫ ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಹೊಂದಿದ್ದು ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಂತಾಗಿದೆ.

ಇಲ್ಲಿ ತಾಯವ್ವನ ದೇವಸ್ಥಾನದ ಗದ್ದುಗೆ, ಪಕ್ಕದಲ್ಲಿ ಗಣಪತಿ, ನಾಗಪ್ಪ, ಮೈಲಾರ ನಿಂಗಪ್ಪ, ಈಶ್ವರ ದೇವರುಗಳು ಒಂದೇ ದೇವಸ್ಥಾನದಲ್ಲಿದ್ದರೆ, ಎದುರಿನಲ್ಲಿಯೇ ಹನುಮಂತನ ದೇವಸ್ಥಾನವಿದೆ.

ಏಳು ಮಕ್ಕಳ ತಾಯವ್ವನ ಸದ್ಭಕ್ತರು, ಸೇವಾ ಸಮಿತಿಯವರು ಇನ್ನೂ ಹೆಚ್ಚಿನ ಅನುದಾನವನ್ನು ನೀಡಬೇಕು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಮುಂದಾಗಬೇಕು ಆಗ್ರಹಿಸಿದ್ದಾರೆ. ಜಾತ್ರಾ ಮಹೋತ್ಸವವು ನವೆಂಬರ್ ೨೮ರಂದು ಸಾಯಂಕಾಲ ೪-೩೫ ಗಂಟೆಗೆ ರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗುವುದು. ಕಾರ್ಯಕ್ರಮದ ಸಾನ್ನಿಧ್ಯವನ್ನು ಅಕ್ಕಿಮಠದ ಗುರುಲಿಂಗಸ್ವಾಮಿಗಳು ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ಶಾಸಕ ಯಾಸೀರಹ್ಮದಖಾನ ಪಠಾಣ, ಮುಂಡಗೋಡ ಯಲ್ಲಾಪೂರ ಶಾಸಕ ಶಿವರಾಮ ಹೆಬ್ಬಾರ, ಹೆಸ್ಕಾಂ ಸಂಸ್ಥೆಯ ಅಧ್ಯಕ್ಷ ಸೈಯ್ಯದ ಅಜ್ಜೀಂಪೀರ ಖಾದ್ರಿ, ಗಡಿ ಪ್ರಾದಿಕಾರದ ಅಧ್ಯಕ್ಷ ಸೋಮಣ್ಣಾ ಬೇವಿನಮರದ, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಆಗಮಿಸುವರು. ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು ಹಾಗೂ ತಡಸ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು ಹಾಗೂ ಸಮಿತಿ ಸದಸ್ಯರುಗಳು ಗ್ರಾಮದ ತಾಲೂಕಿನ ವಿವಿಧ ಮುಖಂಡರುಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.