ಇಂದು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ

| Published : May 18 2025, 01:23 AM IST

ಇಂದು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

50 ವರ್ಷಗಳ ಹಿಂದೆ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮಯೂರ ಚಿತ್ರ ಮಂದಿರ ಪ್ರಾರಂಭಿಸಿದ್ದರಿಂದ ಇಂದು ಅಂಕಲಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕನ್ನಡಮಯ ವಾತಾವರಣ ಬೆಳೆಯಲು ಸಾಧ್ಯವಾಗಿದೆ ಎಂದು ಮಯೂರ ಚಿತ್ರಮಂದಿರದ ಮಾಲೀಕ, ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

50 ವರ್ಷಗಳ ಹಿಂದೆ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮಯೂರ ಚಿತ್ರ ಮಂದಿರ ಪ್ರಾರಂಭಿಸಿದ್ದರಿಂದ ಇಂದು ಅಂಕಲಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕನ್ನಡಮಯ ವಾತಾವರಣ ಬೆಳೆಯಲು ಸಾಧ್ಯವಾಗಿದೆ ಎಂದು ಮಯೂರ ಚಿತ್ರಮಂದಿರದ ಮಾಲೀಕ, ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು. ತಾಲೂಕಿನ ಅಂಕಲಿ ಗ್ರಾಮದ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ನಿಮಿತ್ತ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.18ರಂದು ಸಂಜೆ 5ಕ್ಕೆ ಮಯೂರ ಚಿತ್ರಮಂದಿರದ 50ನೇ ವಾರ್ಷಿಕ ಸಮಾರಂಭದ ಮುಖ್ಯ ಅತಿಥಿಯಾಗಿ ಚಿತ್ರನಟರಾದ ವಿ ರವಿಚಂದ್ರನ್, ಡಾಲಿ ಧನಂಜಯ, ಮಂಡ್ಯ ರಮೇಶ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ನಟಿ ಅನುಪ್ರಭಾಕರ, ಸಪ್ತಮಿ ಗೌಡ, ಅಮೂಲ್ಯ ಮುಂತಾದವರು ಆಗಮಿಸುವರು. ರಾತ್ರಿ 7.30ಕ್ಕೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅಂಕಲಿ ಗ್ರಾಮದಲ್ಲಿ ಕೆಎಲ್‍ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಭರತೇಶ ಬನವಣೆ, ಅಜೀತ ದೇಸಾಯಿ, ಸುರೇಶ ಪಾಟೀಲ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಅಣ್ಣಾಸಾಹೇಬ ಜಕಾತೆ, ಕುಮಾರ ಕೋರೆ ಮುಂತಾದವರು ಇದ್ದರು.