ಇಂದು ಜೆಡಿಎಸ್ ಪಕ್ಷದ ರಜತ ಮಹೋತ್ಸವ

| Published : Nov 21 2025, 01:00 AM IST

ಸಾರಾಂಶ

ಸಂಜೆ 4 ಗಂಟೆಗೆ ಧ್ವಜಾರೋಹಣ, 5 ಗಂಟೆಗೆ ಪಕ್ಷವು ನಡೆದ ಬಂದ ಸಾಧನೆಗಳ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸುವರು. 6 ಗಂಟೆಗೆ ವಿವಿಧ ಘಟಕಗಳ ಪರಿಷತ್ ಉದ್ಘಾಟಿಸಿ ನ. 22ರ ಶನಿವಾರ ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಪಕ್ಷದ ಸಮಾವೇಶ ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಕೋಲಾರಜಾತ್ಯಾತೀತ ಜನತಾದಳ ಪಕ್ಷವು ಸ್ಥಾಪನೆಯಾಗಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಬೆಂಗಳೂರಿನ ಜೆ.ಪಿ. ಭವನದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಆಯೋಜಿಸಿದೆ ಜಿಲ್ಲಾ ಜೆ.ಡಿ.ಎಸ್. ಪಕ್ಷದ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ನಗರದ ಸಿ.ಎಂ.ಆರ್. ಶ್ರೀನಾಥ್‌ರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಜೆ 4 ಗಂಟೆಗೆ ಧ್ವಜಾರೋಹಣ, 5 ಗಂಟೆಗೆ ಪಕ್ಷವು ನಡೆದ ಬಂದ ಸಾಧನೆಗಳ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸುವರು. 6 ಗಂಟೆಗೆ ವಿವಿಧ ಘಟಕಗಳ ಪರಿಷತ್ ಉದ್ಘಾಟಿಸಿ ನ. 22ರ ಶನಿವಾರ ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಪಕ್ಷದ ಸಮಾವೇಶ ಆಯೋಜಿಸಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ೨೦೦ ಮಂದಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದು ಜಿಲ್ಲೆಯ 6 ತಾಲೂಕಿನಿಂದ 1,200 ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪಕ್ಷದ ಸಂಸ್ಥಾಪಕ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಎಂ.ಮಲ್ಲೇಶ್ ಬಾಬು ಸೇರಿದಂತೆ ರಾಜ್ಯದ ಎಲ್ಲಾ ಶಾಸಕರು, ಎಂಎಲ್ಸಿಗಳು, ಪಕ್ಷದ ಪದಾಧಿಕಾರಿಗಳು ಹಿತೈಷಿಗಳು ಭಾಗವಹಿಸಲಿದ್ದು ಸುಮಾರು 10 ಸಾವಿರ ಮಂದಿ ಸಂಘಟನೆಯಾಗುವ ನಿರೀಕ್ಷೆ ಇದೆ. ಇದೊಂದು ಹಬ್ಬದ ಮಾದರಿಯ ವಾತಾವರಣ ನಿರ್ಮಾಣವಾಗಲಿದೆ ಎಂದರು. ಜೆಡಿಎಸ್ ಪಕ್ಷ ಬೆಳೆದು ಬಂದ ಹಾದಿ, ಏಳು-ಬೀಳುಗಳು, ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ, ರಾಷ್ಟ್ರದ ಪ್ರಧಾನಿಗಳಾಗಿ ಮಾಡಿರುವ ಸಾಧನೆಗಳ ಜೊತೆಗೆ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ, ಸಚಿವರಾಗಿ, ಸಿಎಂ ಆಗಿ ಮಾಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಜೆ.ಡಿ.ಎಸ್. ಪಕ್ಷವು ರಾಜ್ಯದಲ್ಲಿ ಆಡಳಿತ ನಡೆಸಿದ ಸಂದರ್ಭದಲಿನ ಜನಪರ ಕಾರ್ಯಕ್ರಮ ವಸ್ತುಪ್ರದರ್ಶನದ ಸಾಧನ ಸಮಾವೇಶ ನಡೆಯಲಿದೆ.ಮುಂಬಲಿರುವ ಸ್ಥಳೀಯ ಸಂಸ್ಥೆಗಳು, ಪಂಚಾಯಿತಿ ಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಎನ್.ಡಿ.ಎ ಮೈತ್ರಿ ಅಡಿಯಲ್ಲಿ ಬಿಜೆಪಿ-ಜೆ.ಡಿ.ಎಸ್. ಪಕ್ಷವು ಜಂಟಿಯಾಗಿ ಎದುರಿಸಲಿದೆ. ಈ ಹಿಂದೆ ನಡೆದಿರುವ ತಪ್ಪುಗಳನ್ನು ಮರಳಿ ಮಾಡದಂತೆ ಎಚ್ಚರಿಕೆಯಿಂದ ಮುಂದುವರೆಸಲಾಗುವುದು. ಮುಂಬರಲಿರುವ ಚುನಾವಣೆಯಲ್ಲಿ ಬಿಹಾರದ ಮಾದರಿಯಲ್ಲಿ ಎನ್.ಡಿ.ಎ. ಮೈತ್ರಿಯಾಗಲಿದೆ, ಎರಡರಷ್ಟು ಫಲಿತಾಂಶ ಪಡೆದು ಆಡಳಿತ ಚುಕ್ಕಾಣಿ ಹಿಡಿಯುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.ದೇವೇಗೌಡರು ಜಾತಿಗೆ ಸೀಮಿತವಲ್ಲ:

ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ದೇವೇಗೌಡರು ಯಾವುದೇ ಜಾತಿ ಸಮುದಾಯಕ್ಕೆ ಸೇರಿದವರಲ್ಲ ಇಡೀ ರಾಜ್ಯವಲ್ಲ ಇಡೀ ದೇಶಕ್ಕೆ ಬೇಕಾಗಿರುವಂತ ಗೌರವನ್ವಿತ ಮಹನೀಯರು ದೇವೇಗೌಡರು ಜೆ.ಡಿ.ಎಸ್ ಪಕ್ಷದ ಸಂಸ್ಥಾಪಕರಾಗಿ ಪ್ರಾದೇಶಿಕ ಪಕ್ಷವಾಗಿ ರೂಪಿಸಿದ್ದಾರೆ ಎಂದರು.

ಬೆಂಗಳೂರಿನ ಕುರುಬರ ಸಮುದಾಯದ ಸಭೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ವೈಯುಕ್ತಿ ಅಭಿಪ್ರಾಯ ತಿಳಿಸಿದ್ದಾರೆ ಹೊರತು ಯಾವುದೇ ಪಕ್ಷದ ಸಭೆಯಲ್ಲಿ ಹೇಳಿಲ್ಲ. ಈ ಸಂಬಂಧವಾಗಿ ಈಗಾಗಲೇ ಬಿಜೆಪಿ ಪಕ್ಷದ ಮುಖಂಡರಿಗೂ ಮಾಹಿತಿ ನೀಡಲಾಗಿದೆ, ಇಂತಹ ಅಸಂಬದ್ದವಾದ ಹೇಳಿಕೆಗಳಿಂದ ಉಂಟಾಗುವಂತ ಗೊಂದಲಗಳಿಗೆ ಕಡಿವಾಣ ಹಾಕಲು ಮನವಿ ಮಾಡಲಾಗಿದೆ.ಗೋವಿಂದರಾಜು ಭರವಸೆ ಸಮಿತಿ ಅಧ್ಯಕ್ಷರಾಗಿ ನೇಮಕ:

ವಿಧಾನ ಪರಿಷತ್ತಿನ ಭರವಸೆ ಸಮಿತಿ ಅಧ್ಯಕ್ಷರಾಗಿ ಇಂಚರ ಗೋವಿಂದ ರಾಜು ನೇಮಕ ಮಾಡಿದೆ ಎಂದು ಜೆ.ಡಿ.ಎಸ್ ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಲೂರು ರಾಮೇಗೌಡ. ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ವಡಗೂರು ರಾಮು, ಕೋಮುಲ್ ನಿದೇರ್ಶಕ ವಡಗೂರು ಡಿ.ವಿ.ಹರೀಶ್, ಜೆ.ಡಿ.ಎಸ್. ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ನರಸಾಪುರ ಎಸ್.ಎಫ್.ಸಿ.ಎಸ್.ಸಿ ಬ್ಯಾಂಕ್ ಅಧ್ಯಕ್ಷ ಡಿ.ಎಂ.ನಾಗರಾಜ್, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್, ಮುಖಂಡರಾದ ಗಿರೀಶ್, ಜನಪನಹಳ್ಳಿ ಆನಂದ್, ಶ್ರೀನಿವಾಸ್, ರೋಟರಿ ಗೋಪಲಗೌಡ ಇದ್ದರು.