ಇಂದು ಸ್ವಯಂ ಸೇವಾ ಸಂಸ್ಥೆಯ 5 ವರ್ಷದ ಕಾರ್ಯತಂತ್ರ, ನೀತಿ ನಿರೂಪಣ ಕಾರ್ಯಾಗಾರ

| Published : Aug 29 2025, 01:00 AM IST

ಇಂದು ಸ್ವಯಂ ಸೇವಾ ಸಂಸ್ಥೆಯ 5 ವರ್ಷದ ಕಾರ್ಯತಂತ್ರ, ನೀತಿ ನಿರೂಪಣ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕ) ವತಿಯಿಂದ ಮೈಸೂರು ವಿಭಾಗೀಯ ಆರು - ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಐದು ವರ್ಷಗಳ ಕಾರ್ಯತಂತ್ರ, ನೀತಿ- ನಿರೂಪಣ ಕಾರ್ಯಾ ಗಾರವನ್ನು ಶುಕ್ರವಾರ ಆಯೋಜಿಸಲಾಗಿದೆ ಎಂದು ಫೆವಾರ್ಡ್-ಕ ಕಾರ್ಯಕ್ರಮ ಸಂಯೋಜಕ ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕ) ವತಿಯಿಂದ ಮೈಸೂರು ವಿಭಾಗೀಯ ಆರು - ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಐದು ವರ್ಷಗಳ ಕಾರ್ಯತಂತ್ರ, ನೀತಿ- ನಿರೂಪಣ ಕಾರ್ಯಾ ಗಾರವನ್ನು ಶುಕ್ರವಾರ ಆಯೋಜಿಸಲಾಗಿದೆ ಎಂದು ಫೆವಾರ್ಡ್-ಕ ಕಾರ್ಯಕ್ರಮ ಸಂಯೋಜಕ ಕೃಷ್ಣಮೂರ್ತಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕರ್ನಾಟಕ) ಒಕ್ಕೂಟವು ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಒಕ್ಕೂಟಗಳನ್ನು ರಚಿಸಿದ್ದು, ಇದರಲ್ಲಿ ಸುಮಾರು 1500ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ಸದಸ್ಯತ್ವ ಪಡೆದುಕೊಂಡಿದೆ ಎಂದು ತಿಳಿಸಿದರು.ರಾಜ್ಯದ ದುರ್ಬಲ ವರ್ಗದ ಸಾಮಾಜಿಕ ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಸಂಘಟಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಒಕ್ಕೂಟದ ಮೂಲಕ ಬಲವರ್ದನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಕಾರ್ಯನ್ಮೂಖರಾಗಿ ಕಾರ್ಯನಿರ್ವಹಿಸಲು ರಾಜ್ಯ ಒಕ್ಕೂಟವು ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತಿದೆ ಎಂದರು.

ಮೈಸೂರು ವಿಭಾಗೀಯ ವ್ಯಾಪ್ತಿಗೆ ಬರುವ ಮೈಸೂರು, ರಾಮನಗರ, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 100ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ಆ. 29ರಂದು ಬೆಳಗ್ಗೆ 10.45ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಾ ಗಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಉದ್ಘಾಟಿಸಲಿದ್ದು, ಮುಖ್ಯಅತಿಥಿಗಳಾಗಿ ಜಿಪಂ ಕಾರ್ಯನಿರ್ವಹಕಾಧಿಕಾರಿ ಮೋನಾ ರೋತ್‌, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಭಿಂದ್ಯಾ, ಫೆವಾರ್ಡ-ಕ ರಾಜ್ಯಾಧ್ಯಕ್ಷ ಮಹೇಶ್‌ ಚಂದ್ರಗುರು, ಮೈಸೂರು ವಿಭಾಗೀಯ ಉಪಾಧ್ಯಕ್ಷ ಎ.ಎಸ್‌. ಪ್ರೇಮ, ಫೆವಾರ್ಜ್‌-ಕ ಮೈಸೂರು ವಿಭಾಗೀಯ ನಿರ್ದೇಶಕ ವಿ.ಎನ್‌ ಮೂರ್ತಿ ಅವರು ಭಾಗವಹಿಸಲಿದ್ದಾರೆ ಎಂದರು.

ಪೆವಾರ್ಡ್‌-ಕ ಒಕ್ಕೂಟದ ವಿ.ಎನ್.ಮೂರ್ತಿ, ಶಾಂತರಾಜು, ತಿವಾರಿ, ರಜನಿ, ಮಂಟೇಲಿಂಗಯ್ಯ, ಕದಂಬ ನಾ.ಅಂಬರೀಷ್ ಇದ್ದರು.