ಖ್ಯಾತ ಉದ್ಯಮಿಯಾಗಿದ್ದ ಕರ್ಮಯೋಗಿ ಎಸ್ ಎಸ್ ಪಾಟೀಲರ 4 ನೇ ಪುಣ್ಯಸ್ಮರಣೋತ್ಸವ ಹಾಗೂ ಕರ್ಮಯೋಗಿ ಪುರಸ್ಕಾರ ಪ್ರದಾನ ಸಮಾರಂಭವು ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ರಾಂಪೂರೆ ವೈದ್ಯ ವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ಆ. 23ರಂದು ಸಂಜೆ 5 ಕ್ಕೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿಖ್ಯಾತ ಉದ್ಯಮಿಯಾಗಿದ್ದ ಕರ್ಮಯೋಗಿ ಎಸ್ ಎಸ್ ಪಾಟೀಲರ 4 ನೇ ಪುಣ್ಯಸ್ಮರಣೋತ್ಸವ ಹಾಗೂ ಕರ್ಮಯೋಗಿ ಪುರಸ್ಕಾರ ಪ್ರದಾನ ಸಮಾರಂಭವು ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ರಾಂಪೂರೆ ವೈದ್ಯ ವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ಆ. 23ರಂದು ಸಂಜೆ 5 ಕ್ಕೆ ನಡೆಯಲಿದೆ. ಸಮಾರಂಭದಲ್ಲಿ ಪಾಟೀಲರ ಸ್ಮರಣಾರ್ಥ ಶಿಕ್ಷಣ ರಂಗದ ಸಾಧನೆಗಾಗಿ ಚೆನ್ನವೀರ ಸಿವಾಚಾರ್ಯರು ಹಾರಕೂಡ್, ಸಮಾಜ ಸೇವೆಗಾಗಿ ಡಾ. ವಿಲಾಸವತಿ ಖೂಬಾ, ಸಹಿತ್ಯ ರಂಗದಲ್ಲಿ ಏಕೆ ರಾಮೇಶ್ವರ, ಆರೋಗ್ಯ ರಂಗದಲ್ಲಿ ಡಾ.ಶೇಖರ ಪಾಟೀಲ್, ಉದ್ಯಮ ರಂಗದ ಸಾಧನೆಗೆ ಡಾ. ಸಂಜೀವ ಗುಪ್ತಾ, ವಾಣಿಜ್ಯೋದ್ಯಮ ರಂಗದಲ್ಲಿನ ಸಾಧನೆಗೆ ರಾಹುಲ ಕುಮಾರ್ ಬಲ್ದೋಟಾ, ಉದ್ಯಮ ರಂಗದಲ್ಲಿ ಪ್ರೀತಮ ಮೇಹ್ತಾ ಇವರಿಗೆ ಕರ್ಮಯೋಗಿ ಪುರಸ್ಕಾರ ಪ್ರದಾನವೂ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಬಳಗಾರ್ ಅವರು, ಪಾಟೀಲರು ಕರ್ಮಯೋಗಿಯಗಿದ್ದರು, ಖುದ್ದು ಉದ್ಯಮಿಯಗಿದ್ದು, ಕಲಬುರಗಿ ಪ್ರಗತಿ ಬಯಲಿದ್ದರು. ಅವರ ಸ್ಮರಣೆಯನ್ನು ಇತರ ಸಾಧಕರಿಗೆ ಪ್ರೋತ್ಸಾಹಿಸುವ ಗುರುತಿಸುವ ಮೂಲಕ ಮಾಡಿಕೊಳ್ಳಲಾಗುತ್ತಿದೆ ಎಂದರು.ಭಾನುವಾರ ಸಂಜೆ 5. 30 ಕ್ಕೆ ಪಂಡಿತ ರಂಗ ಮಂದಿರದಲ್ಲಿ ಸಮಾರಂಭ ನಡೆಯಲಿದ್ದು, ಸಣ್ಣ ನೀರಾವರಿ ಖಾತೆ ಸಚಿವ ಡಾ. ಅಜಯ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಮನು ಬಳಗಾರ್ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಗೌರವ ಅಧ್ಯಕ್ಷರಾಗಿ ಸರೋಜಿನಿ ದೇವಿ ಪಾಟೀಲ್, ಪಾಟೀಲ್ ಗ್ರುಪ್‌ನ ಲಿಂಗರಾಜ ಪಾಟೀಲ್, ಬಸವಂತಕುಮಾರ ಪಾಟೀಲ್, ರೇವಣಸಿದ್ದ ಪಾಟೀಲ್, ಸಿದ್ದಲಿಂಗ ಪಾಟೀಲ್ ಉಪಸ್ಥಿತರಿರುತ್ತಾರೆ.