ಇಂದು ಚನ್ನಗಿರಿ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

| Published : Jul 11 2024, 01:35 AM IST

ಇಂದು ಚನ್ನಗಿರಿ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನ ನಲ್ಲೂರು, ತಾವರೆಕೆರೆ, ಗೊಪ್ಪೇನಹಳ್ಳಿ, ಲಿಂಗದಹಳ್ಳಿ ಈ ಗ್ರಾಮಗಳಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಎಲ್ಲ 11 ಕೆವಿ ಎನ್.ಜೆ,ವೈ ಮತ್ತು ಐ.ಪಿ. ಮಾರ್ಗಗಳಲ್ಲಿ ಜುಲೈ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜು ನಾಯ್ಕ ತಿಳಿಸಿದ್ದಾರೆ.

ಚನ್ನಗಿರಿ: ತಾಲೂಕಿನ ನಲ್ಲೂರು, ತಾವರೆಕೆರೆ, ಗೊಪ್ಪೇನಹಳ್ಳಿ, ಲಿಂಗದಹಳ್ಳಿ ಈ ಗ್ರಾಮಗಳಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಎಲ್ಲ 11 ಕೆವಿ ಎನ್.ಜೆ,ವೈ ಮತ್ತು ಐ.ಪಿ. ಮಾರ್ಗಗಳಲ್ಲಿ ಜುಲೈ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜು ನಾಯ್ಕ ತಿಳಿಸಿದ್ದಾರೆ.

ಗೊಪ್ಪೇನಹಳ್ಳಿಯ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ 11 ಕೆವಿ ವಿದ್ಯುತ್ ವಿತರಣೆಯಾಗುವ ಗ್ರಾಮಗಳಾದ ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಕಂಚಿಗನಾಳ್, ಮಲಹಾಳ್, ಗೊಲ್ಲರಹಟ್ಟಿ, ಬೆಟ್ಟಕಡೂರು, ಹರಳಘಟ್ಟ, ಮರವಂಜಿ, ತಾಂಡ, ಗೊಲ್ಲರಹಟ್ಟಿ, ಹಲಕನಹಾಳ್, ಮೇದುಗೊಂಡನಹಳ್ಳಿ, ಜಮ್ಮಾಪುರ, ಬೀಡುಗೊಂಡನಹಳ್ಳಿ ದೊಡ್ಡತಾಂಡ, ಸಣ್ಣತಾಂಡ, ವಡ್ನಾಳ್ ಮತ್ತು ಸುತ್ತಲಿನ ಗ್ರಾಮಗಳು.

ತಾವರೆಕೆರೆ 66/11ಕೇಂದ್ರದಿಂದ 21ಗ್ರಾಮಗಳು, ಲಿಂಗದಹಳ್ಳಿ 66/11 ಕೆ.ವಿ ಉಪ ಕೇಂದ್ರದಿಂದ 21 ಗ್ರಾಮಗಳು, ನಲ್ಲೂರು 66/11 ಕೆ.ವಿ ಕೇಂದ್ರದಿಂದ 10 ಗ್ರಾಮಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ತಿಳಿಸಿದ್ದಾರೆ.