ಸಾರಾಂಶ
- ವಿವಿಧ ವಿದ್ಯುತ್ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರುವುದಿಲ್ಲ: ಬೆಸ್ಕಾಂ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಸ್ಕಾಂ ವತಿಯಿಂದ ತಾಲೂಕಿನ ವಿವಿಧ ವಿದ್ಯುತ್ ಮಾರ್ಗಗಳಲ್ಲಿ ಡಿ.28ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ತಾತ್ಕಾಲಿಕ ಅಡಚಣೆಗೆ ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ತಿಳಿಸಿದೆ.ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು:
ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಶಾಮನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿಐಇಟಿ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಬಿನ್ನಿ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಕ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಎಚ್.ಕೆ.ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸ ಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್‌ಪೀರ್ ಬಡಾವಣೆ.
ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕಾ ದೇವಸ್ಥಾನ ಸುತ್ತಮುತ್ತ, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗೂ ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಪಿ.ಬಿ. ರಸ್ತೆ., ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶ್ರೀ ಮುರುಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಪೊಲೀಸ್ ಕ್ವಾರ್ಟಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.ಎಂ.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂಟಪ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಎಸ್.ಎಸ್. ಬಡಾವಣೆ ಎ ಬ್ಲಾಕ್. ಹನುಮನಹಳ್ಳಿ, ಕೊಗ್ಗನೂರು, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಪಿ.ಬಿ. ರೋಡ್, ರಿಲಯನ್ಸ್ ಮಾರ್ಕೆಟ್, ಸುಲ್ತಾನ್ ಡೈಮೈಂಡ್ಸ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ನಿಟುವಳ್ಳಿ ಹಾಗೂ ನಿಟುವಳ್ಳಿ ಹೊಸ ಬಡಾವಣೆ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, 60 ಅಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಡೆಂಟಲ್ ಕಾಲೇಜ್ ರಸ್ತೆ, ಮ್ಯಾಕ್ಸ್, ಕೆಎಸ್‌ಪಿ, ಕಡ್ಲಿ ಬಿಲ್ಡಿಂಗ್, ಬಿಎಸ್‌ಸಿ, ಎಆರ್‌ಜಿ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ನಿಜಲಿಂಗಪ್ಪ ಬಡಾವಣೇ, ರಿಂಗ್‌ರೋಡ್, ಕುಂದವಾಡ ರಸ್ತೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್ ಹಾಗೂ ಸುತ್ತಮುತ್ತಲ ಪ್ರದೇಶಗಳು.
ಎ.ವಿ.ಕೆ ಕಾಲೇಜ್ ರಸ್ತೆ, ರತ್ನಮ್ಮ ಮಹಿಳಾ ಹಾಸ್ಟೆಲ್, ಸೀತಮ್ಮ ಕಾಲೇಜ್ ಮತ್ತು ಬಡಾವಣೆ ಪೊಲೀಸ್ ಠಾಣೆ, ಹದಡಿ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಂ.ಬಿ. ಕೇರಿ, ಹೊಂಡದ ಸರ್ಕಲ್, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇ.ಡಬ್ಲೂ.ಎಸ್. ಕಾಲೋನಿ, ಹಳೇಪೇಟೆ, ಬಾರ್‌ಲೈನ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಇ.ಎಸ್.ಐ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶಕ್ತಿನಗರ, ಬನಶಂಕರಿ ದೇವಸ್ಥಾನ ರಾಜೇಂದ್ರ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಮೀನು ಮಾರುಕಟ್ಟೆ, ಜೋಗಲ್ ಬಾಬಾ ಲೇ ಔಟ್, ಮುಸ್ತಾಫಾ ನಗರ. ದಿಂಡದಹಳ್ಳಿ, ನರಗನಹಳ್ಳಿ, ಮಾಯಕೊಂಡ, ಬೊಮ್ಮೆನಹಳ್ಳಿ, ಬಾವಿಹಾಳು, ಬುಳ್ಳಾಪುರ, ಕೊಡಗನೂರು, ನಲ್ಕುಂದ, ಬಸಾಪುರ, ಅಣಬೇರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು,
ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರಿರಾಮ ನಗರ, ಕಾಡಜ್ಜಿ, ಬಸವನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.- - -
ಬಾಕ್ಸ್ * ಇಲ್ಲಿ ಮಾತ್ರ ವಿದ್ಯುತ್ ವ್ಯತ್ಯಯ ಇಲ್ಲ ದಾವಣಗೆರೆ: ಬೆಸ್ಕಾಂನಿಂದ ದಾವಣಗೆರೆ ತಾ. 66/11 ಕೆ.ವಿ. ಮಾಯಕೊಂಡ, ಯರಗುಂಟೆ, ಅತ್ತೀಗೆರೆ, ಮೇಳ್ಳೆಕಟ್ಟೆ ಮತ್ತು ಕಾಡಜ್ಜಿ ವಿದ್ಯುತ್ ಕೇಂದ್ರದಲ್ಲಿ ಡಿ.28 ರಂದು ಹಮ್ಮಿಕೊಂಡಿದ್ದ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಪರಿಣಾಮ ಅಂದು ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ 11 ಕೆವಿ ವಿದ್ಯುತ್ ಮಾರ್ಗಗಳಲ್ಲಿ ಯಾವುದೇ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.- - -
(ಸಾಂದರ್ಭಿಕ ಚಿತ್ರ)