ಸಾರಾಂಶ
ಶಿಗ್ಗಾಂವಿ: ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಇಂದಿನ ಮಕ್ಕಳಿಗೆ ಮೊದಲಿಗೆ ತಿಳಿ ಹೇಳಬೇಕು ಎಂದು ಭೂದಾನಿ ವಾಸುದೇವ ರಾಯ್ಕರ ಹೇಳಿದರು.ಪಟ್ಟಣದ ವಿಠಲ ಹರಿ ಮಂದಿರದಲ್ಲಿ ನಡೆದ ದೈವಜ್ಞ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಮಕ್ಕಳು ಸಹಿತ ಇತರೇ ಮಕ್ಕಳಂತೆ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದರು ಸಹಿತ ನಮ್ಮ ಮಕ್ಕಳನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಮ್ಮ ಸಮಾಜದ ಮಕ್ಕಳನ್ನು ನಾವೇ ಸನ್ಮಾನಿಸುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದ ಶಿಕ್ಷಣ ಪ್ರೇಮಿ ದತ್ತಣ್ಣ ವೇರ್ಣೆಕರ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ನಿಂದ ದೂರವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ಇಲ್ಲದಿದ್ದರೆ ಖಿನ್ನತೆಗೆ ಒಳಗಾಗುತ್ತಾರೆ ಎಂದು ಕಿವಿಮಾತು ಹೇಳಿದರು. ಪ್ರಕಾಶ ಪಾಲನಕರ ಮಾತನಾಡಿ, ಶಾಲೆಯಲ್ಲಿ ಕಲಿಸಿದ ವಿದ್ಯೆಯನ್ನು ಅಂದೇ ವಿದ್ಯಾಭ್ಯಾಸ ಮಾಡಿದರೇ ಮಾತ್ರ ನೀವು ಉತ್ತಮ ಫಲಿತಾಂಶ ಪಡೆಯಬಹುದು ಅಲ್ಲದೇ ಉನ್ನತ ಹುದ್ದೆಯನ್ನು ಅಲಂಕರಿಸಬಹುದು ಎಂದರು. ಎಸ್‌ಎಸ್‌ಎಲ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಸ್ಪಂದನಾ ಮಂಜುನಾಥ ವೇರ್ಣೇಕರ, ಗೌರಿಆನಂದ ವೇರ್ಣೇಕರ ಅವರನ್ನು ಸನ್ಮಾನಿಸಿ ಕಿರು ಕಾಣಿಕೆ ನೀಡಲಾಯಿತು.ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ, ಉಪಾಧ್ಯಕ್ಷ ಸಂಕೇತ ರಾಯ್ಕರ, ಕಾರ್ಯದರ್ಶಿ ರವಿ ರಾಯ್ಕರ, ವಿನಾಯಕ ರಾಯ್ಕರ, ನಾಗೇಶ ರಾಯ್ಕರ, ಗಜಾನನ ಕುಡತರಕರ, ಭೂದಾನಿ ರೇವಣಕರ, ಮಂಜುನಾಥ ವೇರ್ಣೇಕರ, ಆನಂದ ವೇರ್ಣೇಕರ, ರಾಘವೇಂದ್ರ ದೈವಜ್ಞ, ಗಜಾನನ ಶೇಜವಾಡಕರ, ಗಣೇಶ ದೈವಜ್ಞ, ಸುರೇಶ ಪಾಲನಕರ, ಪ್ರದೀಪ ವೇರ್ಣೇಕರ, ಮನೋಜ ರಾಯ್ಕರ, ಗಜಾನನ ಶಿರೋಡಕರ, ಸಂತೋಷ ರಾಯ್ಕರ, ಸೂರಜ ರಾಯ್ಕರ ಸೇರಿದಂತೆ ಮಹಿಳಾ ಮಂಡಳದ ಸದಸ್ಯರು ಹಾಗೂ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು.