ನಿರಂತರ ಮಳೆಗೆ ಟೊಮೆಟೊ, ಹತ್ತಿ ಬೆಳೆ ನಾಶ

| Published : Aug 25 2024, 01:49 AM IST

ಸಾರಾಂಶ

ಇತ್ತೀಚಿಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತಾಲೂಕಿನ ಜಾಲೋಡು ಗ್ರಾಮದ ರೈತನ 5 ಎಕರೆ ಟೊಮೆಟೊ ಹಾಗೂ 4 ಎಕರೆ ಫಸಲಿಗೆ ಬರುತ್ತಿದ್ದ ಹತ್ತಿ ಬೆಳೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಇತ್ತೀಚಿಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತಾಲೂಕಿನ ಜಾಲೋಡು ಗ್ರಾಮದ ರೈತನ 5 ಎಕರೆ ಟೊಮೆಟೊ ಹಾಗೂ 4 ಎಕರೆ ಫಸಲಿಗೆ ಬರುತ್ತಿದ್ದ ಹತ್ತಿ ಬೆಳೆ ಹಾನಿಯಾಗಿದೆ.

ಈ ಕುರಿತು ಸಂತ್ರಸ್ತ ರೈತ ವೈ.ಪರಮೇಶ್‌ ಮಾತನಾಡಿ, ತಾಲೂಕಿನ ಚಿಕ್ಕ ಜಾಲೋಡು ಗ್ರಾಮದಲ್ಲಿ 5 ಎಕರೆ ಟೊಮೆಟೊ ಹಾಗೂ 4 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ನಾಟಿ ಮಾಡಿದ್ದು, ಬೆಳೆ ಫಸಲಿಗೆ ಕಟಾವು ಮಾಡುವ ಹಂತಕ್ಕೆ ಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆ ಪರಿಣಾಮ ಟೊಮೆಟೊ ಹಾಗೂ ಹತ್ತಿ ಬೆಳೆ ನಲಕಚ್ಚಿದೆ ಎಂದರು.

ವ್ಯವಸಾಯದ ಸಲುವಾಗಿ ಬ್ಯಾಂಕ್‌ ಹಾಗೂ ಇತರೆ ರೈತರಿಂದ ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಮಳೆಯ ಪರಿಣಾಮ ಬೆಳೆ ನಷ್ಟಕ್ಕಿಡಾಗಿದ್ದು, ಇದರ ಬಗ್ಗೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಹಗೆ ಮಾಹಿತಿ ನೀಡಿದರೂ ಭೇಟಿ ನೀಡಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.