ಚಿಕ್ಕಮಗಳೂರುವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಮಡಿಲು ಶೀರ್ಷಿಕೆಯಡಿ ‘ಮಮತೆಯ ಮಡಿಲಿಗಿದು ಗೀತ ನಮನ’ ಕಾರ್ಯಕ್ರಮವನ್ನು ಮೇ 9 ರ ಸಂಜೆ 6 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಯುರೇಕಾ ಅಕಾಡೆಮಿ ಮುಖ್ಯಸ್ಥ ದೀಪಕ್ ದೊಡ್ಡಯ್ಯ ತಿಳಿಸಿದರು.
ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಮಡಿಲು ಶೀರ್ಷಿಕೆಯಡಿ ‘ಮಮತೆಯ ಮಡಿಲಿಗಿದು ಗೀತ ನಮನ’ ಕಾರ್ಯಕ್ರಮವನ್ನು ಮೇ 9 ರ ಸಂಜೆ 6 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಯುರೇಕಾ ಅಕಾಡೆಮಿ ಮುಖ್ಯಸ್ಥ ದೀಪಕ್ ದೊಡ್ಡಯ್ಯ ತಿಳಿಸಿದರು.
ನಗರದ ಪ್ರಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್ ಸಂಸ್ಥೆ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕಿ ನಾಗಶ್ರೀ ತ್ಯಾಗರಾಜ್ ಉದ್ಘಾಟಿಸಲಿದ್ದಾರೆ. ಯುರೇಖಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಲಯತ್ ಸಂಸ್ಥೆ ಅಧ್ಯಕ್ಷ ಸಿ.ಎನ್.ಕುಮಾರ್, ಕಾರ್ಯದರ್ಶಿ ಗೋಪಿಕೃಷ್ಣ ಉಪಸ್ಥಿತರಿರಲಿದ್ದಾರೆ ಎಂದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆಯುವ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ರಮ್ಯಾ ಪ್ರಸನ್ನ, ಶೃತಿ ಮಹೇಶ್, ಮಹೇಶ್ ಪ್ರಿಯದರ್ಶನ್, ಚೇತನ್ ರಾಮ್, ರೂಪಾ ಅಶ್ವಿನ್, ಅನುಷಾ, ಪೃಥ್ವಿಶ್ರೀ, ಮೇಘ, ಅರ್ಪಿತಾ, ಕೆ.ಎಸ್.ಚಿನ್ಮಯಿ ಅವರು ತಾಯಿಯ ಕುರಿತಾದ ಚಿತ್ರಗೀತೆಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದರು.ಕೀಬೋರ್ಡ್ ನಲ್ಲಿ ಮೆಲ್ವಿನ್ ಲೀಮಾ, ಕೊಳಲಿನಲ್ಲಿ ಸಮರ್ಥ್ ಹೆಗಡೆ, ತಬಲಾದಲ್ಲಿ ವಿಠಲ್ ರಂಗಧೋಳ್ ಹಾಗೂ ರಿದಂ ಪ್ಯಾಡ್ ನಲ್ಲಿ ಮೋಹನ್ ಕುಮಾರ್ ವಾದ್ಯ ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್, ಗಾಯಕಿ ಸುಮಾ ಪ್ರಸಾದ್ ಉಪಸ್ಥಿತರಿದ್ದರು.ಫೋಟೋ: ದೀಪಕ್ ದೊಡ್ಡಯ್ಯ