ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ 71ನೇ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮವನ್ನು ನಗರದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದಲ್ಲಿ ನ.7ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಬಾಬು ರಾವ್ ತಿಳಿಸಿದ್ದಾರೆ.

- ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಉದ್ಘಾಟನೆ: ಬಾಬುರಾವ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ 71ನೇ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮವನ್ನು ನಗರದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದಲ್ಲಿ ನ.7ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಬಾಬು ರಾವ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6 ಗಂಟೆಗೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು ಎಂದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ವಿಜಯ ನಗರ ಜಿಲ್ಲೆ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ, ಎಂಎಲ್‌ಸಿ ಕೆ.ಎಂ.ಸುರೇಶ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ, ವಿಶ್ವಚೇತನ ವಿದ್ಯಾಸಂಸ್ಥೆ ಸಂಸ್ಥಾಪಕಿ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಯುವ ಉದ್ಯಮಿ ಶ್ರೀನಿವಾಸ ವಿ.ಶಿವಗಂಗಾ , ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ, ಮಾಜಿ ಮೇಯರ್‌ ಎಂ.ಎಸ್. ವಿಠ್ಠಲ್, ಮುಸ್ಲಿಂ ಮುಖಂಡರಾದ ಸಾದಿಕ್ ಪೈಲ್ವಾನ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಮ್ ರಜ್ವಿ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಾಗಿ ಆರ್.ಟಿ.ಪ್ರಶಾಂತ, ನಿವೃತ್ತ ಯೋಧ ಎಸ್.ಶಾಮ್, ಪರಿಸರ ಕ್ಷೇತ್ರದ ಎನ್.ಎಂ. ಪರಮೇಶ್ವರಪ್ಪ, ಫೋಕಸ್ ಟೀವಿ ವರದಿಗಾರ ಜಿ.ಎನ್ ರಾಮು, ಉದಯವಾಣಿಯ ಎಚ್.ಕೆ.ನಟರಾಜ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಮಹಾಂತೇಶ ಕುರಬೇಟ, ಪರಿಸರ ಕ್ಷೇತ್ರದಿಂದ ಕೈದಾಳ್ ಶಿವಶಂಕರ ಅವರನ್ನು ಸನ್ಮಾನಿಸಲಾಗುವುದು ಎಂದರು.

ಧಾರ್ಮಿಕ ಕ್ಷೇತ್ರದಿಂದ ಎ.ಎಚ್. ಸಿದ್ದಲಿಂಗ ಸ್ವಾಮಿ, ಎಂ.ಎಚ್. ಮಂಜುನಾಥ, ರಂಗಭೂಮಿಯ ನೀಲಗುಂದ ಬಸವನಗೌಡ, ರೈತ ಪರ ಹೋರಾಟಗಾರ ಚಿನ್ನಸಮುದ್ರ ಶೇಖರ ನಾಯ್ಕ, ಸಮಾಜ ಸೇವೆಗಾಗಿ ಮನು ಎಂ. ದೇವನಗರಿ, ಅನಿಲ್ ಮುಂಡಾಸದ, ನಿಟುವಳ್ಳಿ ಶಾಲೆ ಶಿಕ್ಷಕ ಕೆ.ಟಿ.ಜಯಪ್ಪ, ಎಂ.ಮಂಜುನಾಥ, ತನ್ವೀರ್ ಭಾಷಾ, ಎಲ್.ಮಂಜುನಾಥ, ಪಿ.ಎನ್. ನಾಗೇಶ ಬಾಬು, ಕೆ.ಎಚ್. ಲಿಂಗಸ್ವಾಮಿ ರಾವ್‌ ಅವರನ್ನು ಸನ್ಮಾನಿಸಲಾಗುವುದು. ನಂತರ ಭಾರತಿ ವಾದ್ಯ ವೃಂದದಿಂದ ರಸಮಂಜರಿ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ವೇದಿಕೆಯ ಎನ್.ರವಿ, ಅಮ್ಜದ್ ಅಲಿ, ಅಶ್ವತ್ಥ ನಾರಾಯಣ, ಸೈಯದ್ ಶಹಬಾಜ್, ಇಸ್ಮಾಯಿಲ್ ಜಬೀವುಲ್ಲಾ ಇತರರು ಇದ್ದರು.

- - -

-5ಕೆಡಿವಿಜಿ3: ದಾವಣಗೆರೆಯಲ್ಲಿ ಗುರುವಾರ ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬುರಾವ್‌, ಪ್ರಧಾನ ಕಾರ್ಯದರ್ಶಿ ಅಜಮ್‌ ರಜ್ವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.