ನಾಳೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

| Published : Apr 05 2025, 12:45 AM IST

ಸಾರಾಂಶ

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ತಾಲೂಕಿನ ಅಣಜಿ ಸಮೀಪದ ಗೊಲ್ಲರಹಳ್ಳಿಯಲ್ಲಿ ಏ.6ರಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ವಿಜೃಂಭಣೆ ಬ್ರಹ್ಮರಥೋತ್ಸವ, ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ದಾವಣಗೆರೆ: ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ತಾಲೂಕಿನ ಅಣಜಿ ಸಮೀಪದ ಗೊಲ್ಲರಹಳ್ಳಿಯಲ್ಲಿ ಏ.6ರಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ವಿಜೃಂಭಣೆ ಬ್ರಹ್ಮರಥೋತ್ಸವ, ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ತಿರುಮಲ- ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿ ಪಡಗಾಲ ಶ್ರೀ ಆನಂದ ತೀರ್ಥಚಾರ್ಯ ಗುರುಗಳು ಆಶೀರ್ವಚನ ನೀಡಲಿದ್ದಾರೆ. ತಿರುಪತಿ ಅರ್ಚಕರ ತಂಡವೂ ಆಗಮಿಸಲಿದೆ.

ಬೆಳಗ್ಗೆ 7.30 ರಿಂದ ತಿರುಪತಿ ಅರ್ಚಕರ ತಂಡದಿಂದ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಯ ಮೂರ್ತಿಗಳಿಗೆ ಪುಷ್ಪಯಾಗ ಪೂಜಾ ಕಾರ್ಯಕ್ರಮ, ಸಂಜೆ 4 ಗಂಟೆಗೆ ಅಮೃತ ಘಳಿಗೆಯಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ.

ತಿರುಪತಿಯಿಂದ ತರಲಾಗುವ ಸ್ವಾಮಿಯ ಸ್ವರ್ಣಾಮೂರ್ತಿ ವಿಗ್ರಹದ ಪೂಜೆ ಉತ್ಸಾಹದೊಂದಿಗೆ ವಾರ್ಷಿಕ ರಥೋತ್ಸವವು ಸಂಪನ್ನಗೊಳ್ಳಲಿದೆ. ಈ ವರ್ಷ ನುರಿತ ಕುಶಲ ಶಿಲ್ಪಿಗಳಿಂದ ನೂತನವಾಗಿ ನಿರ್ಮಿಸಲಾಗಿರುವ ರಥವನ್ನು ಅಮೃತ ಘಳಿಗೆಯಲ್ಲಿಯೇ ಸ್ವಾಮಿಗೆ ಅರ್ಪಿಸಲಾಗುವುದು ಎಂದು ದೇವಸ್ಥಾನದ ಸೇವಾ ಸಮಿತಿ ತಿಳಿಸಿದೆ.

ಇದರ ಅಂಗವಾಗಿ ಏ.5ರಂದು ಬೆಳಗ್ಗೆ 9 ಗಂಟೆಯಿಂದ ಗಣಹೋಮ, ಮಧ್ಯಾಹ್ನ 12.30ಕ್ಕೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಅರ್ಚಕರ ಸಂಗಡಿಗರಿಂದ ಹೋಮ ನೆರವೇರಲಿದೆ. ಸಂಜೆ 4 ಗಂಟೆಗೆ ವಿಷ್ಣು ಸಹಸ್ರ ನಾಮ ಪಾರಾಯಣ, ನಾಲ್ಕು ವೇದಗಳ ಪಾರಾಯಣ ಆಯೋಜಿಸಲಾಗಿದೆ.