ಸಾರಾಂಶ
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸಂಸ್ಕೃತಿ ಚಿಂತಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಾಯುಪುತ್ರ ಡೆವಲಪರ್ಸ್ ನ ಎನ್. ಚೆಲುವರಾಜು, ಲೇಖಕ ವಿಜಯ ಚಂದ್ರಮೌಳೇಶ್ವರ್, ಪ್ರತಿಮಾ ಅರುಣ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಜನಚೈತನ್ಯ ಫೌಂಡೇಷನ್ ವತಿಯಿಂದ ಆ. 5 ರಂದು ಸಂಜೆ 4.30 ರಿಂದ ರಾತ್ರಿ 9.30 ರವರೆಗೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಶೀರ್ಷಿಕೆ ಅಡಿ ಭಾವಗೀತೆ ಮತ್ತು ಜನಪದ ಗೀತೆಗಳ ಸಂಗೀತ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸುವರು, ಕರ್ನಾಟಕ ರಾಜ್ಯ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜು ವಿ. ಭೈರಿ ಅಧ್ಯಕ್ಷತೆ ವಹಿಸುವರು ಎಂದು ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸಂಸ್ಕೃತಿ ಚಿಂತಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಾಯುಪುತ್ರ ಡೆವಲಪರ್ಸ್ ನ ಎನ್. ಚೆಲುವರಾಜು, ಲೇಖಕ ವಿಜಯ ಚಂದ್ರಮೌಳೇಶ್ವರ್, ಪ್ರತಿಮಾ ಅರುಣ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಜನಪ್ರಿಯ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ಆರ್. ಲಕ್ಷ್ಮಣ್, ಜಾಯ್ಸ್ ವೈಶಾಕ್, ಪುಷ್ಪಲತಾ ಶಿವಕುಮಾರ್, ವೈ.ಎಂ. ನಾಗೇಂದ್ರ, ರವಿರಾಜ್ ಹಾಸು, ಸೌಮ್ಯ ಪ್ರಕಾಶ್, ಶೇಷಾದ್ರಿ, ಡಾ. ತಿರುಮಲೇಶ್, ಶ್ರದ್ಧಾ ರವಿರಾಜ್ ಮೊದಲಾದವರು ಗಾಯನ ಪ್ರಸ್ತುತಪಡಿಸುವುದಾಗಿ ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಾಯ್ಸ್ ವೈಶಾಖ್, ಎನ್. ಶ್ರೀನಿವಾಸಲು, ಬಿ.ಎಸ್. ವಿಜಯ್, ಆನಂದ್, ಕೆ. ನರಸಿಂಹಮೂರ್ತಿ, ವೈ.ಎಂ. ನಾಗೇಂದ್ರ ಇದ್ದರು.