ಬಾಳೆಹೊನ್ನೂರುಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ನಾನು ಶಾಸಕನಾದ ನಂತರ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ನಾನು ಶಾಸಕನಾದ ನಂತರ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿ.ಕಣಬೂರು ಗ್ರಾಪಂನಿಂದ ನಿರ್ಮಿಸಿರುವ ನೂತನ ಸ್ವಾಗತ ಕಮಾನು ಹಾಗೂ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿರುವ ಉಳುಮೆ ಮಾಡುತ್ತಿರುವ ರೈತನ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ಧಿಗಾಗಿ ಈ ಹಿಂದೆ ₹50 ಲಕ್ಷ ಅನುದಾನವನ್ನು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಂದ, ಶಾಸಕರ ಅನುದಾನದಲ್ಲಿ ₹25 ಲಕ್ಷ ಅನುದಾನ ನೀಡಲಾಗಿತ್ತು.
ಇದೀಗ ಗ್ರಾಪಂನಿಂದ ಸುಸಜ್ಜಿತ ಸ್ವಾಗತ ಕಮಾನು, ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಲಯನ್ಸ್ ಸಂಸ್ಥೆ ಸಹಕಾರದಲ್ಲಿ ಭಾರತದ ಬೆನ್ನೆಲುಬಾದ ರೈತ ಮತ್ತು ಎತ್ತಿನ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.ಲಯನ್ಸ್ ಸಂಸ್ಥೆ ಸಾರ್ವಜನಿಕವಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸಮಾಜಕ್ಕಾಗಿಯೇ ವಿವಿಧ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಪ್ರಸ್ತುತ ಗ್ರಾಪಂನೊಂದಿಗೆ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಕೈಜೋ ಡಿಸಿರುವುದು ಶ್ಲಾಘನೀಯ. ಪಟ್ಟಣದ ಅಭಿವೃದ್ಧಿಗೆ ನಿರಂತರವಾಗಿ ನನ್ನ ಕಡೆಯಿಂದ ಸಹಕಾರವಿರುತ್ತದೆ ಎಂದು ಹೇಳಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಕಳೆದ ಐದು ವರ್ಷಗಳಿಂದ ಪಟ್ಟಣದಲ್ಲಿ ಅಭಿವೃದ್ಧಿಯ ಪರ್ವ ನಿರಂತರವಾಗಿ ನಡೆಯುತ್ತಿದ್ದು, ಶಾಸಕರ ಸಹಕಾರದಲ್ಲಿ ₹25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ.ವಿದೇಶ ಅಥವಾ ಬೃಹತ್ ನಗರಗಳ ಮಾದರಿಯಲ್ಲಿ ರಸ್ತೆ ವಿಸ್ತರಣೆ ಮಾಡಿ, ಎರಡೂ ಬದಿಗಳಲ್ಲಿ ಉತ್ತಮ ಹೈಮಾಸ್ಟ್ ದೀಪಗಳನ್ನು ಅಳವಡಿಸಿ ಪಟ್ಟಣದ ಚೆಂದ ಹೆಚ್ಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯನ್ನು ತಾಲೂಕು ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್, ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ಲಯನ್ಸ್ ಪೂರ್ವಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಮಂಜುನಾಥ್ ತುಪ್ಪೂರು, ಎಂ.ಆರ್.ಮಂಜುನಾಥ್, ಗುತ್ತಿಗೆದಾರ ಆರ್.ಡಿ.ಮಹೇಂದ್ರ, ಪ್ರಮುಖರಾದ ರಂಜಿತಾ, ಚಂದ್ರಮ್ಮ, ಹೇಮಲತಾ, ಬಿ.ಕೆ.ಮಧುಸೂದನ್, ಎಂ.ಎಸ್.ಅರುಣೇಶ್, ಮಹೇಶ್ ಆಚಾರ್ಯ, ಸದಾಶಿವ, ಸಂತೋಷ್‌ಕುಮಾರ್, ಮಹಮ್ಮದ್ ಹನೀಫ್, ಮಹಮದ್ ಜುಹೇಬ್, ಸರಿತಾ, ಶಶಿಕಲಾ ಮತ್ತಿತರರು ಇದ್ದರು.೨೬ಬಿಹೆಚ್‌ಆರ್ ೩:ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ನಿಂದ ನಿರ್ಮಿಸಿರುವ ಉಳುಮೆ ಮಾಡುತ್ತಿರುವ ರೈತನ ಪ್ರತಿಮೆಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ರವಿಚಂದ್ರ, ವಿಕ್ರಮ್, ಸುಧಾಕರ್, ರವೀಂದ್ರ, ರಂಜಿತಾ, ಚಂದ್ರಮ್ಮ, ಹೇಮಲತಾ ಇದ್ದರು.