ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಧಾರಾಕಾರ ಮಳೆ, ಹಲವೆಡೆ ಹಾನಿ

| Published : Jun 09 2024, 01:39 AM IST

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಧಾರಾಕಾರ ಮಳೆ, ಹಲವೆಡೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟೆ ಗ್ರಾಮದ ಬಜಕಳ ಎಂಬಲ್ಲಿ ಭಾರಿ ಗಾಳಿಗೆ ಕರುಣಾಕರ ಶೆಟ್ಟಿ ಎಂಬವರ ಮನೆ ಹಾಗೂ ಕೊಟ್ಟಿಗೆಯ ಹೆಂಚುಗಳು ಹಾರಿ ಹೋಗಿದ್ದು, ಅಂದಾಜು 60 ಸಾವಿರ ರು. ನಷ್ಟ ಸಂಭವಿಸಿದೆ.

ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದೆ. ಶನಿವಾರ ಬೆಳಗ್ಗಿನಿಂದ ಭಾರಿ ಮಳೆ ಸುರಿದಿದ್ದು ಗಾಳಿ ಮಳೆಗೆ ವಿವಿಧೆಡೆ ಹಾನಿಯುಂಟಾಗಿದೆ. ಬೆನೆಡಿಕ್ಟ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮಿಯ್ಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ಜನಾರ್ದನ ಭಟ್ ಎಂಬವರ ಮನೆ ಮೇಲೆ ಮರ ಬಿದ್ದು 10 ಸಾವಿರ ರು. ನಷ್ಟ ಸಂಭವಿಸಿದೆ.

ನಿಟ್ಟೆ ಗ್ರಾಮದ ಬಜಕಳ ಎಂಬಲ್ಲಿ ಭಾರಿ ಗಾಳಿಗೆ ಕರುಣಾಕರ ಶೆಟ್ಟಿ ಎಂಬವರ ಮನೆ ಹಾಗೂ ಕೊಟ್ಟಿಗೆಯ ಹೆಂಚುಗಳು ಹಾರಿ ಹೋಗಿದ್ದು, ಅಂದಾಜು 60 ಸಾವಿರ ರು. ನಷ್ಟ ಸಂಭವಿಸಿದೆ.

ಕಾರ್ಕಳ ನಗರದಲ್ಲಿ 21.6 ಮಿ.ಮೀ. ಮಳೆಯಾಗಿದ್ದರೆ, ಇರ್ವತ್ತೂರಿನಲ್ಲಿ 21.6 ಮಿ.ಮೀ., ಕೆದಿಂಜೆಯಲ್ಲಿ 63.0 ಮಿ.ಮೀ., ಅಜೆಕಾರು 34. 4, ಮಿ. ಮೀ., ಸಾಣೂರು 29.8 ಮಿ.ಮೀ., ಕೆರ್ವಾಶೆ 45. 2 ಮಿ. ಮೀ., ಮುಳಿಕಾರು 54.6 ಮಿ.ಮೀ. ಮಳೆಯಾಗಿದೆ.