ಸಾರಾಂಶ
ತರೀಕೆರೆ, ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಗಾಳಿ ಇಂದು ಕೂಡ ಮುಂದುವರಿದ ಪರಿಣಾಮ ತಾಲೂಕಿನಲ್ಲಿ ಹಲವೆಡೆ ಮನೆಗಳಿಗೆ ಹಾನಿ, ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಗಾಳಿ ಇಂದು ಕೂಡ ಮುಂದುವರಿದ ಪರಿಣಾಮ ತಾಲೂಕಿನಲ್ಲಿ ಹಲವೆಡೆ ಮನೆಗಳಿಗೆ ಹಾನಿ, ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದಾಗಿ ಸಮೀಪದ ಬಾವಿಕೆರೆ ಗ್ರಾಮದಲ್ಲಿ ಚಿದಾನಂದ ಎಂಬುವವರ ಕೊಟ್ಟಿಗೆ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು, ಹಸುವಿಗೆ ಬಾಗಶಃ ಪೆಟ್ಟಾಗಿದೆ ಮತ್ತು ಬಾವಿಕೆರೆ ಗ್ರಾಮದ ಸೇವ್ಯಾನಾಯ್ಕ ಎಂಬುವವರ ಮನೆ, ತರೀಕೆರೆ ಪಟ್ಟಣದಲ್ಲಿ ಶಿವಮ್ಮ, ಟಿ.ಕೆ.ನಾಗರಾಜ್ ಹಾಗೂ ಗಂಗಮ್ಮ ಅವರ ಮನೆ ಸೇರಿ ಒಟ್ಟು ಐದು ಮನೆಗಳು ಮಳೆಗೆ ಹಾನಿ ಯಾಗಿದೆ ಎಂದು ಕಂದಾಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಮೀಪದ ಗೋಪಾಲ ಗ್ರಾಮದಲ್ಲಿ ವೈರ್ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು ಮೆಸ್ಕಾಂ ಎಇಇ ಮಂಜುನಾಥ್ ತಿಳಿಸಿದ್ದಾರೆ.26ಕೆಟಿಆರ್.ಕೆಃ8ಃ
ತರೀಕೆರೆ ಸಮೀಪದ ಬಾವಿಕೆರೆ ಗ್ರಾಮದಲ್ಲಿ ಮಳೆಯಿಂದ ಚಿದಾನಂದ ಎಂಬುವವರ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದ್ದು ಹಸುವಿಗೆ ಭಾಗಶಃ ಪೆಟ್ಟಾಗಿದೆ.