ರಾಣಿ ಸ್ನಾನಗೃಹದ ಬಳಿ ಶೌಚಾಲಯ ಇಲ್ಲದೆ ಪ್ರವಾಸಿಗರ ಪರದಾಟ

| Published : Nov 05 2025, 12:45 AM IST

ರಾಣಿ ಸ್ನಾನಗೃಹದ ಬಳಿ ಶೌಚಾಲಯ ಇಲ್ಲದೆ ಪ್ರವಾಸಿಗರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿ ರಾಣಿ ಸ್ನಾನಗೃಹದ ಬಳಿ ಶೌಚಾಲಯ ಇದ್ದರೂ ಮಲಿನ ತುಂಬಿದೆ. ಈ ಶೌಚಾಲಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿಲ್ಲ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರಿಗೆ ಸೂಕ್ತ ಮೂಲ ಸೌಕರ್ಯ ದೊರೆಯದಾಗಿದೆ. ರಾಣಿ ಸ್ನಾನಗೃಹದ ಬಳಿ ಕನಿಷ್ಠ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರು ಇಲ್ಲ!

ಹಂಪಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈಗ ಟ್ಯೂರಿಸ್ಂ ಸೀಜನ್ ಆರಂಭಗೊಂಡಿದ್ದರೂ ದೇಶ, ವಿದೇಶಿ ಪ್ರವಾಸಿಗರಿಗೆ ರಾಣಿ ಸ್ನಾನಗೃಹದ ಬಳಿ ಕನಿಷ್ಠ ಸೌಲಭ್ಯ ದೊರೆಯದಾಗಿದೆ.

ಹಂಪಿ ರಾಣಿ ಸ್ನಾನಗೃಹದ ಬಳಿ ಶೌಚಾಲಯ ಇದ್ದರೂ ಮಲಿನ ತುಂಬಿದೆ. ಈ ಶೌಚಾಲಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿಲ್ಲ. ಸುಸಜ್ಜಿತ ಶೌಚಾಲಯ ನಿರ್ಮಾಣ‌ ಮಾಡಲಾಗಿಲ್ಲ. ಇರುವ ಶೌಚಾಲಯ ಸ್ಥಿತಿ ಹೇಳತೀರದಾಗಿದೆ. ಮಕ್ಕಳು, ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ. ಶುಚಿ ಶೌಚಾಲಯದ ಸೌಲಭ್ಯ ಒದಗಿಸಿ ಹಂಪಿ ಪ್ರವಾಸೋದ್ಯಮದ‌ ಬೆಳವಣಿಗೆಗೆ ಪೂರಕವಾಗಿ ನಡೆದುಕೊಳ್ಳಬೇಕಾದ ಅಧಿಕಾರಿಗಳು ಕಣ್ಣಮುಚ್ಚಿಕೊಂಡಿದ್ದಾರೆ. ಒಂದು ಕಡೆ ಶೌಚಾಲಯ ಸರಿಯಾಗಿಲ್ಲದ್ದರಿಂದ; ಶೌಚಾಲಯದ ಅಕ್ಕಪಕ್ಕದಲ್ಲಿ ಮಲಿನ ತುಂಬಿದೆ. ಭಾರೀ ಗಲಿಜು, ದುರ್ನಾತದಿಂದ ಪ್ರವಾಸಿಗರು ಕಕ್ಕಾಬಿಕ್ಕಿ ಆಗುತ್ತಿದ್ದಾರೆ. ಇನ್ನೂ ಸ್ಥಳೀಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಹಂಪಿ ರಾಣಿ ಸ್ನಾನ ಗೃಹದ ಬಳಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಒಂದು ಕಡೆಯಲ್ಲಿ ಶೌಚಾಲಯ ಸರಿಯಾಗಿಲ್ಲ. ಇನ್ನೊಂದೆಡೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.‌ ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.

ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ; ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ಪಡೆಯಲಾಗುತ್ತಿದೆ. ವಾಹನಗಳ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿದೆ. ಕೋಟ್ಯಂತರ ರು. ಟಿಕೆಟ್ ಶುಲ್ಕ ಹರಿದು ಬರುತ್ತಿದೆ. ಹೀಗಿದ್ದರೂ ಕನಿಷ್ಠ ಸೌಲಭ್ಯ ಒದಗಿಸದೇ ಇರುವುದು ಪ್ರವಾಸಿಗರನ್ನೂ ಅಚ್ಚರಿಗೊಳಿಸಿದೆ.ಸೌಲಭ್ಯ ಕಲ್ಪಿಸಿ

ಹಂಪಿಗೆ ಬರುವ ದೇಶ, ವಿದೇಶಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು. ರಾಣಿ ಸ್ನಾನಗೃಹದ ಬಳಿ ಶೌಚಾಲಯ, ಶುದ್ಧ ಕುಡಿಯುವ ನೀರು ದೊರೆಯುವಂತೇ ವ್ಯವಸ್ಥೆ ಮಾಡಬೇಕು.

ಪ್ರವಾಸಿಗ ಲಕ್ಷ್ಮೀಪತಿ