ಸೂರ್ಯಕಾಂತಿ ಹೂ ಜೊತೆ ಫೋಟೋಗಾಗಿ ಮುಗಿ ಬಿದ್ದ ಪ್ರವಾಸಿಗರು

| Published : May 18 2024, 12:39 AM IST

ಸೂರ್ಯಕಾಂತಿ ಹೂ ಜೊತೆ ಫೋಟೋಗಾಗಿ ಮುಗಿ ಬಿದ್ದ ಪ್ರವಾಸಿಗರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಗರಗನಹಳ್ಳಿ-ಬೆಂಡಗಳ್ಳಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ) ಜಮೀನಿನಲ್ಲಿ ಸೂರ್ಯ ಕಾಂತಿ ಹೂ ಬಿಟ್ಟಿದೆ, ಸೂರ್ಯಕಾಂತಿ ಕಟಾವಿಗೂ ಮುನ್ನವೇ ರೈತನಿಗೆ ದುಪ್ಪಟ್ಟು ಲಾಭವಾಗುತ್ತಿದ್ದು, ಪ್ರವಾಸಿಗರು ಸೂರ್ಯಕಾಂತಿ ಜಮೀನಿನಲ್ಲಿ ಸೂರ್ಯಕಾಂತಿ ಹೂವಿನ ನಡುವೆ ಫೋಟೋಗಾಗಿ ಮುಗಿ ಬೀಳುತ್ತಿದ್ದಾರೆ, ಈ ಸೂರ್ಯಕಾಂತಿ ಜಮೀನೀಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಗರಗನಹಳ್ಳಿ-ಬೆಂಡಗಳ್ಳಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ) ಜಮೀನಿನಲ್ಲಿ ಸೂರ್ಯ ಕಾಂತಿ ಹೂ ಬಿಟ್ಟಿದೆ, ಸೂರ್ಯಕಾಂತಿ ಕಟಾವಿಗೂ ಮುನ್ನವೇ ರೈತನಿಗೆ ದುಪ್ಪಟ್ಟು ಲಾಭವಾಗುತ್ತಿದ್ದು, ಪ್ರವಾಸಿಗರು ಸೂರ್ಯಕಾಂತಿ ಜಮೀನಿನಲ್ಲಿ ಸೂರ್ಯಕಾಂತಿ ಹೂವಿನ ನಡುವೆ ಫೋಟೋಗಾಗಿ ಮುಗಿ ಬೀಳುತ್ತಿದ್ದಾರೆ, ಈ ಸೂರ್ಯಕಾಂತಿ ಜಮೀನೀಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.ಮುಂಗಾರಿನಲ್ಲಿ ಮಳೆ ಬಿದ್ದ ಬಳಿಕ ಸೂರ್ಯಕಾಂತಿ ಬಿತ್ತನೆ ಮಾಡುವುದು ವಾಡಿಕೆ. ಆದರೆ ರೈತರೊಬ್ಬರು ಅರೆ ನೀರಾವರಿ ಮೂಲಕ ಸೂರ್ಯಕಾಂತಿ ಬೆಳೆದಿದ್ದಾರೆ. ಈಗ ಬೇಸಿಕೆ ರಜೆಯಿರುವ ಕಾರಣ ಪ್ರವಾಸಿಗರು ಮೈಸೂರು, ಊಟಿ ಹೆದ್ದಾರಿ ಮೂಲಕವೇ ಕೇರಳ, ತಮಿಳುನಾಡು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವ ಪ್ರವಾಸಿಗರು ಸೂರ್ಯಕಾಂತಿ ಹೂ ಬಿಟ್ಟ ಜಮೀನಿಗೆ ಬೀಡು ಬಿಡುತ್ತಿದ್ದಾರೆ.

ಬೆಳಗ್ಗೆಯಿಂದ ಸಂಜೆ ತನಕ ಮೈಸೂರು-ಊಟಿ ಹೆದ್ದಾರಿಯಲ್ಲಿ ತೆರಳುವ ಪ್ರವಾಸಿಗರು ಸೂರ್ಯಕಾಂತಿ ಹೂ ನೋಡಿ ಫೋಟೋಗಾಗಿ ಜಮೀನಿನ ರೈತನಿಗೆ ತಲಾ ಒಬ್ಬರಿಗೆ ೧೦ ರು.ಕೊಟ್ಟು ಜಮೀನಿಗೆ ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಂಡು ತೆರಳುತ್ತಿದ್ದಾರೆ.

ಕಾಯೋದೇ ಕಾಯಕ:

ಸೂರ್ಯಕಾಂತಿ ಬೆಳೆದ ರೈತ ಬೆಳಗ್ಗೆಯೇ ಜಮೀನಿಗೆ ಬಂದು ಕೂರುತ್ತಾರೆ. ಪ್ರವಾಸಿಗರ ಹೂ ನೋಡಿ ಬಂದಾಗ ತಲಾ ೧೦ ರು. ಪಡೆದು ಜಮೀನಿನ ಒಳಗೆ ಬಿಡುತ್ತಾರೆ. ಪ್ರವಾಸಿಗರನ್ನು ಬೆಳಗ್ಗೆಯಿಂದ ಸಂಜೆ ತನಕ ಕಾಯೋದೇ ಕೆಲಸವಾಗಿದೆ ಎಂದು ರೈತ ರಾಮು ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿ ದಿನ ಮಳೆ ಇಲ್ಲದೆ ಇದ್ರೆ ೧ ರಿಂದ ೧೫೦೦ ರು. ತನಕ ದುಡ್ಡು ಸಿಗುತ್ತದೆ, ರಜಾ ದಿನ ಹಾಗೂ ಶನಿವಾರ, ಭಾನುವಾರ ಹಣ ಹೆಚ್ಚಾಗಿ ಸಿಗುತ್ತಿದೆ ಎಂದು ಹೇಳಿದರು.

೩೦ ದಿನ ಹಣ ಸಿಕ್ತದೆ:

ಸೂರ್ಯಕಾಂತಿ ಹೂ ಬಂದ ನಂತರ ಕನಿಷ್ಠ ೩೦ ದಿನಗಳ ತನಕ ಸೂರ್ಯಕಾಂತಿ ಹೂ ಇರುತ್ತದೆ. ೩೦ ದಿನಗಳ ಕಾಲ ರೈತರಿಗೆ ಸೂರ್ಯಕಾಂತಿ ಆದಾಯ ಬಿಟ್ಟು ಹೆಚ್ಚುವರಿಯಾಗಿ ಪ್ರವಾಸಿಗರ ಕೊಡುವ ದುಡ್ಡು ಸಿಗುತ್ತಿದೆ.

೧೭ಜಿಪಿಟಿ೪

ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್‌ ಬಳಿ ಸೂರ್ಯಕಾಂತಿ ಹೂ ನೊಂದಿಗೆ ಫೋಟೋಗಾಗಿ ಪ್ರವಾಸಿಗರು ಮುಗಿ ಬಿದ್ದ ದೃಶ್ಯ.