ರಾಮ ಮತ್ತು ಹನುಮನ ಜಯಂತಿ ಆಚರಣೆ ಮಾಡದಂತೆ ತಡೆಯುವ ಸರ್ಕಾರಗಳನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ ಅಧಿಕಾರಕ್ಕೆ ಬಾರದಂತೆ ತಡೆಯಲು ಮತದಾರರು ಚುನಾವಣೆಯಲ್ಲಿ ಜಾಗೃತರಾಗಿ ಮತ ಚಲಾಯಿಸಬೇಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳೂ ಆದ ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ ಹೇಳಿದರು.ಪಟ್ಟಣದ ಪುರಸಭೆ ಬಯಲು ರಂಗ ಮಂದಿರ ಆವರಣದಲ್ಲಿ ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿಯಿಂದ ನಡೆದ ದಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಉಚಿತ ಯೋಜನೆಗಳನ್ನು ಪಡೆಯುವ ದುರಾಸೆಯಿಂದ ದೇಶವನ್ನು ಸಂಕಷ್ಟಕ್ಕೆ ದುಡುವ ಕೆಲಸ ನಮ್ಮಿಂದ ಆಗಬಾರದು ಎಂದರು.
ರಾಮ ಮತ್ತು ಹನುಮನ ಜಯಂತಿ ಆಚರಣೆ ಮಾಡದಂತೆ ತಡೆಯುವ ಸರ್ಕಾರಗಳನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದ ಅವರು ದೇಶದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ಅವರು ಗಳು ಹಿಂದು ಧರ್ಮ ವನ್ನು ಕಾಪಾಡುತ್ತಿರುವಂತೆ ರಾಜ್ಯದಲ್ಲಿಯೂ ನಮ್ಮ ಧರ್ಮ ರಕ್ಷಣೆಗಾಗಿ ಮುಂದೆ ಬಿ.ವೈ. ವಿಜೇಂದ್ರ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಗತ್ತು ಭಾರತ ಮತ್ತು ಹಿಂದು ಧರ್ಮದ ಕಡೆಗೆ ತಿರುಗಿ ನೋಡುತ್ತಿರುವ ಕಾಲ ಘಟ್ಟದಲ್ಲಿ ನಾವು ಜೀವಿಸುತ್ತಿದ್ದು, ಇದು ಪ್ರತಿಯೊಬ್ಬ ದೇಶವಾಸಿಯು ಹೆಮ್ಮೆ ಪಡುವ ವಿಚಾರ ಎಂದ ಅವರು, ದೀಪಾವಳಿ ಹಬ್ಬವನ್ನು ನಮ್ಮ ಮಣ್ಣಿನ ಹಣತೆಯಿಂದ ದೀಪ ಬೆಳಗಿಸಿ ಅಮೇರಿಕಾದ ವೈಟ್ ಹೌಸ್ ನಲ್ಲಿ ಆಚರಣೆ ಮಾಡುತ್ತಿದ್ದು, ಇದು ನಾವೂ ಗರ್ವಪಡುವ ವಿಚಾರ ಎಂದರು.
ನಾನು ಶಾಸಕ ಎಂದು ಹೇಳಿಕೊಳ್ಳುವುದಕ್ಕಿಂತ ಅಪ್ಪಟ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸಲಿದ್ದು, ಚುನಾಯಿತ ಜನ ಪ್ರತಿನಿಧಿಯಾಗಿ ಜನ ಸೇವೆ ಮಾಡುವುದರೊಂದಿಗೆ ಹಿಂದು ಧರ್ಮದ ಬೆಳವಣಿಗೆಗೆ ಕೆಲಸ ಮಾಡುವ ಕರ್ತವ್ಯ ನನ್ನದಾಗಿದೆ ಎಂದರು.ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿಮಾತನಾಡಿ, ನಾಡಿನ ಏಳಿಗೆಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದ ಯದುವಂಶದವರನ್ನು ಮರೆತಿರುವ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನನ್ನು ಮೆರೆಸುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರೆಯಬೇಕಾಗುತ್ತದೆ ಎಂದು ಅವರು ಹೇಳಿದರು.
ರಾಮ ಮತ್ತು ಹನುಮನ ಪೂಜೆಯ ಜತೆಗೆ ಹಿಂದೂ ಸಾಮ್ರಾಜ್ಯದ ಉಳಿವಿಗೆ ಪ್ರತಿಯೊಬ್ಬರು ಹೆಗಲು ಕೊಟ್ಟು ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, ಹಿರಿಯರು ಮಾಡಿದ ತ್ಯಾಗ ಬಲಿದಾನಗಳಿಂದ ನಮ್ಮ ಧರ್ಮ ಮತ್ತು ಮಠ ಮಂದಿರಗಳು ಉಳಿದುಕೊಂಡಿದ್ದು, ನಾವು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಹನುಮ ಜಯಂತಿಯ ಆಚರಣಾ ಸಮಿತಿಯವರು 9 ದಿನಗಳ ಕಾಲವಿಭಿನ್ನ ಮತ್ತು ವಿಶಿಷ್ಟವಾಗಿ ಕಾರ್ಯಕ್ರಮ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಯು. ಕೃಷ್ಣಭಟ್, ಕಾರ್ಯಾಧ್ಯಕ್ಷ ಪವನ್ ಶಿವಾಜಿ, ಉಪಾಧ್ಯಕ್ಷ ಬೇಕರಿಉಮೇಶ್, ಖಜಾಂಚಿ ಬಿ.ಎನ್. ಕೃಷ್ಣಮೂರ್ತಿ, ಸಂಚಾಲಕರಾದ ಕೆ.ವಿ. ನಂಜುಂಡ, ರಮೇಶ್ ಇದ್ದರು.