ಶೃಂಗೇರಿ: ತಂಬಾಕು ಉತ್ಪನ್ನಗಳ ಸೇವನೆಗೆ ಬಲಿಯಾದ ವ್ಯಕ್ತಿ ತನ್ನಜೀವನ ಹಾಳು ಮಾಡಿಕೊಳ್ಳುವ ಜೊತೆಗೆ ಕುಟುಂಬ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾನೆ. ಮಾದಕ ದ್ರವ್ಯ ಸೇವನೆ ಬದುಕಿನ ವಿನಾಶಕ್ಕೆ ದಾರಿ ಎಂದು ಶೃಂಗೇರಿ ಪೊಲೀಸ್ ಠಾಣೆ ಉಪನಿರೀಕ್ಷಕ ಮೋಹನ್ ರಾಜಣ್ಣ ಹೇಳಿದರು.

ಮೆಣಸೆ ಕೇಂದ್ರಿಯ ಸಂಸ್ಕೃತ ಪರಿಸರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ಸೇವನಾ ಮುಕ್ತ ಅಭಿಯಾನ ಜಾಗೃತಿ ಹಾಗು ವಿಶ್ವ ಏಡ್ಸ್ ದಿನಾಚಾರಣೆ ಯಲ್ಲಿ ಮಾಹಿತಿ ನೀಡಿದರು. ಇಂದಿನ ಯುವಜನತೆ ಕುತೂಹಲ ಮತ್ತು ಸಹವಾಸ ದೋಷಕ್ಕೆ ಸಿಕ್ಕಿ ಮಾದಕ ದ್ರವ್ಯ ವ್ಯಸನಿಗಳಾಗಿ ಮಾರ್ಪಾಡಾಗುತ್ತಿದ್ದಾರೆ. ಮಾನಸಿಕ, ಶಾರೀರಿಕ ಸ್ವಾಸ್ಥ್ಯ ಹಾಳು ಮಾಡಿಕೊಳ್ಳುವ ಜೊತೆಗೆ ಸಮಾಜದಕ್ಕೆ ಕಂಟಕರಾಗುತ್ತಿದ್ದಾರೆ ಎಂದರು.ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ಮಾದಕ ದ್ರವ್ಯ ಸೇವನೆ ಹಾಗೂ ದುಷ್ಚಟಗಳಿಂದ ಸಾದ್ಯವಾದಷ್ಟು ದೂರವಿದ್ದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆಯ ನೇಹಾ ಮಾತನಾಡಿ ಪ್ರತೀ ವರ್ಷ ಡಿ.1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಏಡ್ಸ್ ರೋಗದ ಬಗ್ಗೆ ಜನರಲ್ಲಿ ಅರಿವು, ಜನಜಾಗೃತಿ ಮೂಡಿಸಬೇಕು. ಏಡ್ಸ್ ರೋಗಿಗಳನ್ನು ಮಾನವೀಯತೆಯಿಂದ ಕಾಣಬೇಕು ಎಂದರು.
ಕೇಂದ್ರಿಯ ಸಂಸ್ಕೃತ ವಿದ್ಯಾಲಯದ ನಿರ್ದೇಶಕ ಸುಬ್ರಾಯ ವಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಗಣೇಶ್ ಈಶ್ವರ್ ಭಟ್, ಡಾ.ಶ್ರೀಕರ ಭಟ್,ಡಾ.ರಾಮಚಂದ್ರ, ಡಾ.ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.4 ಶ್ರೀ ಚಿತ್ರ 1-
ಶೃಂಗೇರಿ ಮೆಣಸೆ ಕೇಂದ್ರೀಯ ಸಂಸ್ಕ್ರತ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ರಾಜಣ್ಣ ಮಾತನಾಡಿದರು.