ಕರುವನ್ನು ಚಿರತೆ ಕೊಂದು ಹಾಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣದ ನಾಗರಿಕರು ಮತ್ತು ಉದ್ದನೂರು ಹಾಗೂ ಬೆಳತೂರು ಸೇರಿದಂತೆ ವಿವಿಧ ಗ್ರಾಮದ ರೈತರು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ತೋಟದ ಮನೆಯಲ್ಲಿದ್ದ ಕರುವನ್ನು ಚಿರತೆ ಬಲಿ ಪಡೆದ ಹಿನ್ನೆಲೆ ಪಟ್ಟಣದ ನಿವಾಸಿಗಳು ಭಯಭೀತರಾಗಿದ್ದಾರೆ.ತಾಲೂಕಿನ ಸಮೀಪದ ಅಣ್ಣಕಟ್ಟೆತಟ್ಟೆ ಹಳ್ಳದ ಸಮೀಪದಲ್ಲಿ ಬರುವ ರೈತ ಪುಟ್ಟಸ್ವಾಮಿ ಗೌಡರ ಜಮೀನಿನಲ್ಲಿರುವ ಮನೆಯಲ್ಲಿ ಕಟ್ಟಿ ಹಾಕಲಾಗಿದ್ದ ಕರುವನ್ನು ಚಿರತೆ ಹೊತ್ತೊಯ್ದು ಹಳ್ಳದಲ್ಲಿ ತಿಂದು ಕಳೆಬರಹವನ್ನು ಬಿಟ್ಟು ಹೋಗಿರುವ ಘಟನೆ ಜರುಗಿದೆ.
ಕರುವನ್ನು ಚಿರತೆ ಕೊಂದು ಹಾಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣದ ನಾಗರಿಕರು ಮತ್ತು ಉದ್ದನೂರು ಹಾಗೂ ಬೆಳತೂರು ಸೇರಿದಂತೆ ವಿವಿಧ ಗ್ರಾಮದ ರೈತರು, ಗ್ರಾಮಸ್ಥರು ಭಯಭೀತರಾಗಿದ್ದಾರೆ.ಸಂಕಷ್ಟದಲ್ಲಿರುವ ರೈತರು:ಇತ್ತೀಚೆಗೆ ತಾಲೂಕಿನ ಬಹುತೇಕ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಮತ್ತು ಚಿರತೆಗಳ ಕಾಟ ಹೆಚ್ಚಾಗಿದ್ದು, ಇದರಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ಅರಣ್ಯ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಅರಣ್ಯದಂಚಿನ ಭಾಗದಲ್ಲಿ ಮಾನವ- ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ:ಪಟ್ಟಣದ ಸನಿಹದಲ್ಲಿಯೇ ಚಿರತೆ ದಾಳಿ ಮಾಡಿರುವುದರಿಂದ ನಾಗರಿಕರು, ರೈತರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಅರಣ್ಯದಂಚಿನ ಭಾಗಗಳಲ್ಲಿರುವ ರೈತರ ಜೀವ ಹಾನಿ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಚಿರತೆಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಡಾನೆಗಳು ಸಹ ಅರಣ್ಯದಂಚಿನ ಜಮೀನುಗಳಲ್ಲಿ ಫಸಲು ನಷ್ಟ ಉಂಟು ಮಾಡಿರುವುದರಿಂದ ಸೂಕ್ತ ಪರಿಹಾರ ನೀಡಿ ಕಾಡುಪ್ರಾಣಿಗಳು ನಾಡಿನತ್ತ ಬರದಂತೆ ತಡೆಗಟ್ಟಬೇಕು ಎಂದು ರೈತ ಮುಖಂಡರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
------26ಸಿಎಚ್ಎನ್11 ಹನೂರು ಪಟ್ಟಣದ ಪಕ್ಕದಲ್ಲಿರುವ ಅಣ್ಣ ಕಟ್ಟೆ ಪುಟ್ಟಸ್ವಾಮಿ ಗೌಡರ ಜಮೀನಿನಲ್ಲಿ ಚಿರತೆ ಕರುವನ್ನು ಕೊಂದು ಕಳೆಬರಹ ಬಿಟ್ಟು ಹೋಗಿರುವ ಘಟನೆ ಜರುಗಿದೆ.