ಸಾರಾಂಶ
ದೇಶದ ಎಲ್ಲಡೆಯಲ್ಲಿಯೂ ಇಂದು ರಾಮನಾಮ ಜಪ ನಡೆದಿದೆ. ರಾಮನ ಐತಿಹಾಸಿಕ ಕುರುಹುಗಳು ದೇಶದ ವಿವಿಧಡೆಗಳಲ್ಲಿ ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿಯೂ ಶ್ರೀರಾಮನ ಕುರುಹುಗಳುನ್ನು ನಾವು ಇಂದಿಗೂ ನೋಡಬಹುದಾಗಿದೆ. ಅಭಿಜಿತ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಐತಿಹಾಸಿಕ ಪರಂಪರೆಯುಳ್ಳ ದೇವಸ್ಥಾನವನ್ನು ಶ್ರೀರಾಮಚಂದ್ರನೇ ಸ್ಥಾಪಿಸಿದ್ದಾನೆ ಎಂಬುವುದು ಪ್ರತೀತಿ.ಆಲಮೇಲ ಪಟ್ಟಣದ ದಕ್ಷಿಣ ದಿಕ್ಕಿಗಿರುವ ಶ್ರೀ ರಾಮಲಿಂಗ ದೇವಸ್ಥಾನ ರಾಮಾಯಣ ಕಾಲದಲ್ಲಿಯೇ ನಿರ್ಮಾಣವಾಗಿದೆಂಬ ಉಲ್ಲೇಖವಿದೆ.
ಕನ್ನಡಪ್ರಭ ವಾರ್ತೆ ಸಿಂದಗಿ

ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಹೋದಾಗ ಶ್ರೀರಾಮಚಂದ್ರ ಸೀತಾಮಾತೆಯನ್ನು ಹುಡುಕುತ್ತ ಲಂಖೆಯ ಕಡೆಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ವಿಶ್ರಾಂತಿ ಮಾಡಿದ್ದ. ಆಲಮೇಲ ದಕ್ಷಿಣ ದಿಕ್ಕಿಗಿರುವ ಹಳ್ಳದ ಸಮೀಪದಲ್ಲಿ ವಿಶ್ರಾಂತಿ ಪಡೆದು ಪೂಜೆಗೆಂದು ಆ ಸ್ಥಳದಲ್ಲಿ ಪಂಚಮುಖದ ಲಿಂಗವನ್ನು ಪ್ರತಿಷ್ಠಾಪಿಸಿ ತನ್ನ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಅಲ್ಲಿಂದ ಪ್ರಯಾಣ ಬೆಳೆಸಿದ ಎನ್ನಾಗಿದೆ. ಪಂಚಮುಖದ ಲಿಂಗವು ದೇಶದ ಕೆಲವೇ ಕಡೆಗಳಲ್ಲಿ ಮಾತ್ರವಿದ್ದು, ಅತ್ಯಂತ ವಿಶಿಷ್ಟ ಎನ್ನುವುದೇ ವಿಶೇಷ.ನಂತರ ಅಯೋಧ್ಯೆದಿಂದ ಒಬ್ಬ ಸಾಧು ಪಂಚಲಿಂಗದ ಹುಡುಕಾಟ ಮತ್ತು ದರ್ಶನಕ್ಕೆಂದು ಶ್ರೀರಾಮನು ಲಂಕೆಗೆ ಹಾದು ಹೋಗಿರುವ ನಕ್ಷೆಯನ್ನು ಹಿಡಿಕೊಂಡು ಈ ದೇವಸ್ಥಾನವನ್ನು ಹುಡುಕಾಡುತ್ತ ಆಲಮೇಲ ಪಟ್ಟಣಕ್ಕೆ ಬಂದು ದರ್ಶನ ಪಡೆದು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಇಂದಿಗೂ ಕೂಡಾ ಈ ದೇವಸ್ಥಾನವನ್ನು ಶ್ರೀರಾಮಚಂದ್ರನೇ ಸ್ಥಾಪಿಸಿದ್ದಾನೆ ಎಂದು ಶ್ರೀರಾಮನ ನೆನಪಿನಲ್ಲಿ ಆ ಪಂಚಮುಖ ಲಿಂಗವನ್ನು ರಾಮಲಿಂಗ ಎಂದು ಸಂಬೋಧಿಸಿ ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಮತ್ತು ಶಿವರಾತ್ರಿ ದಿನದಂದು ಇಲ್ಲಿನ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.