ತ್ರಿವಿಧ ದಾಸೋಹಿಯ 5ನೇ ಪುಣ್ಯಸ್ಮರಣೆ ಆಚರಣೆ

| Published : Jan 22 2024, 02:17 AM IST

ಸಾರಾಂಶ

ಕೊಳ್ಳೇಗಾಲನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜೀರವರ 5 ನೇ ವರ್ಷದ ಪುಣ್ಯಸ್ಮರಣೆಯನ್ನು ಇಲ್ಲಿನ ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗದ ವತಿಯಿಂದ ಆಚರಣೆ ಮಾಡಿದರು.ಪಟ್ಟಣದ ಜನನಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮೋದಿ ಟೀ ಸ್ಟಾಲ್ ನಲ್ಲಿ ಇಂದು ನಡೆದ ಪುಣ್ಯಸ್ಮರಣೆಯಲ್ಲಿ ಶಿವಕುಮಾರಸ್ವಾಮಿಜೀ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು. ತಿಮ್ಮರಾಜೀಪುರ, ಬೂದಿತಿಟ್ಟು, ಮುಡಿಗುಂಡ, ಮುಳ್ಳೂರು, ಮಧುವನಹಳ್ಳಿ ಸೇರಿದಂತೆ ಗ್ರಾಮಾಂತರದ ಭಜನಾ ತಂಡದ ವತಿಯಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಭಜನೆಯನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜೀರವರ 5 ನೇ ವರ್ಷದ ಪುಣ್ಯಸ್ಮರಣೆಯನ್ನು ಇಲ್ಲಿನ ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗದ ವತಿಯಿಂದ ಆಚರಣೆ ಮಾಡಿದರು.

ಪಟ್ಟಣದ ಜನನಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮೋದಿ ಟೀ ಸ್ಟಾಲ್ ನಲ್ಲಿ ಇಂದು ನಡೆದ ಪುಣ್ಯಸ್ಮರಣೆಯಲ್ಲಿ ಶಿವಕುಮಾರಸ್ವಾಮಿಜೀ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು. ತಿಮ್ಮರಾಜೀಪುರ, ಬೂದಿತಿಟ್ಟು, ಮುಡಿಗುಂಡ, ಮುಳ್ಳೂರು, ಮಧುವನಹಳ್ಳಿ ಸೇರಿದಂತೆ ಗ್ರಾಮಾಂತರದ ಭಜನಾ ತಂಡದ ವತಿಯಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಭಜನೆಯನ್ನು ನಡೆಸಿಕೊಟ್ಟರು.ಸಿದ್ದಗಂಗಾಮಠದ ಪರಮಪೂಜ್ಯ ಶ್ರೀ.ಡಾ.ಶಿವಕುಮಾರಸ್ವಾಮೀಜಿರವರು ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ-ಧರ್ಮ ಭೇದವಿಲ್ಲದೇ ವಿದ್ಯೆ, ವಸತಿ, ದಾಸೋಹ ನೀಡಿ ತ್ರಿವಿಧ ದಾಸೋಹಿಗಳಾಗಿದ್ದರು. ಪ್ರತಿನಿತ್ಯ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಅವರ ನೆನಪಿನ ಅಂಗವಾಗಿ ಇಂದು ನಮ್ಮ ಸ್ನೇಹಿತರ ಬಳಗದ ವತಿಯಿಂದ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ, ಬಳಿಕ ಸಾರ್ವಜನಿಕರಿಗೆ ದಾಸೋಹ ನೀಡಲಾಯಿತು. ಇಂತಹ ಮಹಾನ್ ವ್ಯಕ್ತಿಗಳ ಆಶಯವನ್ನು ನಾವೇಲ್ಲರೂ ಮುಂದುವರೆಸಿಕೊಂಡು ಉತ್ತಮವಾದ ಜೀವನ ನಡೆಸೋಣ ಎಂದು ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗದವರು ತಿಳಿಸಿದರು. ಈ ಸಂದರ್ಭದಲ್ಲಿ ಮೋದಿ ಟೀ ಸ್ನೇಹಿತರ ಬಳಗದ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರು ಎಂ.ಬಸವರಾಜಪ್ಪ, ಬೂದಿತಿಟ್ಟು ಗುರುಸ್ವಾಮಿ, ಮಾದಿ ಮಹಾದೇವಸ್ವಾಮಿ, ಅಚ್ಗಾಲ್ ಮಹಾದೇವಸ್ವಾಮಿ, ಲೋಕೇಶ್ ಲಯನ್ಸ್, ಅಪ್ಪು ಟೀಂ ರಾಜೇಶ್, ಸ್ವಾಮಿ ಫ್ಲವರ್, ಕೆಎಸ್ ಡಿಸಿ ವೃಷಭೇಂದ್ರ, ಪ್ರಕಾಶ್ ಶಾಮಿಯಾನ, ಸುರೇಶ್ ಬೂದಿತಿಟ್ಟು ಹಾಗೂ ಇತರರು ಇದ್ದರು.ಗಣ್ಯರಿಂದ ನಮನ:

ಮೋದಿ ಟೀಸ್ಟಾಲ್ ಬಳಿ ನಡೆದ ಡಾ.ಶಿವಕುಮಾರಸ್ವಾಮಿರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎನ್.ಮಹೇಶ್, ಎಸ್.ಬಾಲರಾಜು, ಜಿ.ಪಂ ಮಾಜಿ ಸದಸ್ಯ ಮುಳ್ಳೂರು ಕಮಲ್, ಮುಖಂಡರುಗಳಾದ ನಾರಾಯಣ್ ಪ್ರಸಾದ್, ಕವಿತಾ, ರಾಮಕೃಷ್ಣ, ಪ್ರಭುಸ್ವಾಮಿ, ಬಸವರಾಜಪ್ಪ, ಸೇರಿದಂತೆ ಅನೇಕ ಗಣ್ಯರು ಪುಷ್ಪನಮನ ಸಲ್ಲಿಸಿ ನಮನ ಸಲ್ಲಿಸಿದರು.