ಸಾರಾಂಶ
ದೇವರ ಹಿಪ್ಪರಗಿಯ ಮಹಿಬೂಬ ಅಮೀನಸಾಬ ಹಳ್ಳಿ ಎಂಬಾತ ಟ್ರ್ಯಾಕ್ಟರ್‌ನ್ನು ಯರ್ರಾಬಿರ್ರಿ ಚಲಾವಣೆ ಮಾಡಿ ಪಲ್ಟಿಗೆ ಕಾರಣವಾದ ವ್ಯಕ್ತಿ ಟ್ಯಾಕ್ಟರ್ ಚಾಲಕ ಮಹಿಬೂಬಸಾಬ್ ಗೆ ತೀವ್ರ ಗಾಯವಾಗಿದೆ
ವಿಜಯಪುರ: ಬೇಕಾಬಿಟ್ಟಿ ಟ್ರ್ಯಾಕ್ಟರ್ ಚಾಲನೆ ಮಾಡಿದ್ದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವನಪ್ಪಿದ ಘಟನೆ ಜಿಲ್ಲೆಯ ಬಂಥನಾಳ ಕ್ರಾಸ್ ಬಳಿ ನಡೆದಿದೆ.
ಚಿಕ್ಕ ರೂಗಿಯ ಶಹನವಾಜ ನಬಿಸಾಬ ಕೊರಬು (೪೦) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ದೇವರ ಹಿಪ್ಪರಗಿಯ ಮಹಿಬೂಬ ಅಮೀನಸಾಬ ಹಳ್ಳಿ ಎಂಬಾತ ಟ್ರ್ಯಾಕ್ಟರ್‌ನ್ನು ಯರ್ರಾಬಿರ್ರಿ ಚಲಾವಣೆ ಮಾಡಿ ಪಲ್ಟಿಗೆ ಕಾರಣವಾದ ವ್ಯಕ್ತಿ ಟ್ಯಾಕ್ಟರ್ ಚಾಲಕ ಮಹಿಬೂಬಸಾಬ್ ಗೆ ತೀವ್ರ ಗಾಯವಾಗಿದೆ. ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.