ಕಳ್ಳರು ಅಂಗಡಿಗಳ ಬಾಗಿಲು ಮುರಿದು ನಗದು ಹಾಗೂ ವಸ್ತು ಕಳ್ಳತನ ಮಾಡುವ ಘಟನೆ ನಿರಂತರವಾಗಿ ನಡೆಯುತ್ತಿದೆ
ಹನುಮಸಾಗರ: ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವರ್ತಕರು ಪಪಂಗೆ ಬುಧವಾರ ಪ್ರಮುಖ ರಸ್ತೆ ಹಾಗೂ ವೃತ್ತಕ್ಕೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವರ್ತಕರು, ಹನುಮಸಾಗರ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ.ಇದರಿಂದ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಗಣನೀಯವಾಗಿ ಹೆಚ್ಚಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳರು ಅಂಗಡಿಗಳ ಬಾಗಿಲು ಮುರಿದು ನಗದು ಹಾಗೂ ವಸ್ತು ಕಳ್ಳತನ ಮಾಡುವ ಘಟನೆ ನಿರಂತರವಾಗಿ ನಡೆಯುತ್ತಿದೆ.ಕಳ್ಳರ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಪಟ್ಟಣದ ಪ್ರಮುಖ ರಸ್ತೆ, ವೃತ್ತ,ವ್ಯಾಪಾರ ಕೇಂದ್ರ ಮತ್ತು ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪಪಂದಿಂದ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕಳ್ಳತನ ಪ್ರಕರಣ ತಡೆಯಲು ಸಹಕಾರಿಯಾಗುವುದರ ಜತೆಗೆ ಮುಂದಾಗಬಹುದಾದ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಬಹುದು ಎಂದರು.
ಪಂಚಾಯಿತಿ ಬಿಲ್ ಕಲೆಕ್ಟರ್ ಮಹಾಂತಯ್ಯ ಕೋಮಾರಿ ವರ್ತಕರ ಮನವಿ ಸ್ವೀಕರಿಸಿ, ಮೇಲಾಧಿಕಾರಿ ಆಗಮಿಸಿದ ನಂತರ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಶ್ರೀವಿನಾಯಕ ವರ್ತಕರ ಸಂಘದ ಅಧ್ಯಕ್ಷ ಶೇಖರಪ್ಪ ಸಜ್ಜನ, ಉಪಾಧ್ಯಕ್ಷ ರವೀಂದ್ರ ವಾಲಿ, ಶ್ರೀಶೈಲ್ ಮೋಟಗಿ, ಮೌಲಿ ಮೋಟಗಿ, ಪ್ರಶಾಂತ ಕುಲಕರ್ಣಿ, ನೀತಿನ್ ಪಾಟೀಲ್, ರಾಘವೇಂದ್ರ ಮಿಸ್ಕಿನ್, ಗಣಪತಸಾ ಮೆಹರವಾಡೆ, ಸತೀಶ ಬಸ್ವಾ, ಪ್ರವೀಣ ಮೆಹರವಾಡೆ, ಪ್ರಶಾಂತ ಹುಲಮನಿ, ಕಿರಣಸಾ ನಿರಂಜನ, ವೆಂಕಟೇಶ ಗುಡಿಕೋಟಿ, ರಾಘವೇಂದ್ರ ಪವಾರ, ಇಬ್ರಾಹಿಂ ಮೂಲಿಮನಿ, ಮಂಜುನಾಥ ದೇವಳೆ ಸೇರಿದಂತೆ ಅನೇಕ ವರ್ತಕರು ಇತರರು ಇದ್ದರು.