ಸಾರಾಂಶ
ಎಲ್.ಎಸ್. ಶ್ರೀಕಾಂತ್
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ನಗರದ ಪುರಭವನದ ಆವರಣದಲ್ಲಿ ಬೆಳ್ಳಂಬೆಳಗ್ಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿ ಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ಮಾಡಿದ ಮೈಸೂರಿನವರಾದ ಅಲ್ಟ್ರಾ ಸೈಕಲಿಸ್ಟ್ ನವೀನ್ ಡಿ.ಎಸ್. ಸೌಲಂಕಿ ಹಸಿರು ಬಾವುಟ ತೋರಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 10 ದಿನಗಳಲ್ಲಿ 15 ಗಂಟೆಗಳ ಅವಧಿಯಲ್ಲಿ 3,758 ಕಿ.ಮೀ. ಸೈಕ್ಲಿಂಗ್ ಮಾಡಿರುವುದು ಹೆಮ್ಮೆ ತಂದಿದೆ. ದೇಹವನ್ನು ಆರೋಗ್ಯ ಹಾಗೂ ಸದೃಢವಾಗಿ ಇಟ್ಟುಕೊಳ್ಳಬೇಕು. ಪ್ರತಿದಿನ ಸೈಕಲ್ಗಿಂಗ್ ಅಭ್ಯಾಸ ಮಾಡಿ, ಇದಕ್ಕೆ ಮೈಸೂರು ಉತ್ತಮವಾದ ಸ್ಥಳವಾಗಿದೆ ಎಂದರು.ನೂರಾರು ಯುವಕ-ಯುವತಿಯರು ಸೈಕಲ್ ಸಾವಾರಿ ಮಾಡಿ ಮೈಸೂರಿನಲ್ಲಿರುವ ಪ್ರಮುಖ ಪಾರಂಪರಿಕ ಕಟ್ಟಡಗಳ ಇತಿಹಾಸ, ಅದರ ಹಿನ್ನೆಲೆ, ಪ್ರಾಮುಖ್ಯತೆ, ಹಾಗೂ ವಾಸ್ತುಶಿಲ್ಪಗಳ ಬಗ್ಗೆ ಮಾಹಿತಿ ಪಡೆದರು.
''''''''''''''''ನಮ್ಮ ಪಾರಂಪರೆ ನಮ್ಮ ಹೆಮ್ಮೆ'''''''''''''''' ಹೆಸರಿದ್ದ ಟೀ ಶರ್ಟ್ ಧರಿಸಿದ್ದ ನೂರಾರು ಯುವಕ-ಯುವತಿಯರು ಸೈಕಲ್ ಸವಾರಿ ಮಾಡುತ್ತಾ ಪುರಭವನ, ದೊಡ್ಡ ಗಡಿಯಾರ, 10ನೇ ಚಾಮರಾಜೇಂದ್ರ ವೃತ್ತ, ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ಸೇರಿದಂತೆ ನಗರದ 20 ಪಾರಂಪರಿಕ ಕಟ್ಟಡಗಳತ್ತಾ ಸಾಗಿ ಆಯಾ ಕಟ್ಟಡದ ಮುಂಭಾಗದಲ್ಲಿ ಇತಿಹಾಸ ತಜ್ಞರಾದ ಡಾ. ಶಲ್ವ ಪಿಳೈ ಅಯ್ಯಂಗಾರ್ ಹಾಗೂ ನಿವೃತ್ತ ಪ್ರೊ. ರಂಗನಾಥ ಅವರು ಕಟ್ಟಡಗಳ ಹಿನ್ನೆಲೆ, ವಾಸ್ತುಶಿಲ್ಪ ಸೇರಿ ರೋಚಕ ಇತಿಹಾಸದ ಸಂಗತಿಗಳನ್ನು ತಿಳಿಸಿದರು.ನಗರದ ಪುರಭವನದಿಂದ ಆರಂಭಗೊಂಡ ಸೈಕಲ್ ಸವಾರಿಯು ದೊಡ್ಡ ಗಡಿಯಾರ, ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್‌ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಹಳೇ ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಹಾಲ್, ಮೆಟ್ರೊಪೋಲ್ ವೃತ್ತ, ರೇಲ್ವೆ ನಿಲ್ದಾಣ, ಕೃಷ್ಣ ರಾಜೇಂದ್ರ ಆಸ್ಪತ್ರೆ (ಕೆ.ಆರ್. ಆಸ್ಪತೆ) ವೃತ್ತ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತದಿಂದ ಪುರಭವನದಲ್ಲಿ ಮುಕ್ತಾಯಗೊಂಡಿತು
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು, ಇಲಾಖೆಯ ಮಂಜುಳಾ, ತಾರಕೇಶ್, ಅಂಬರೀಶ್ ಇತರರು ಇದ್ದರು.