ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಶನಿವಾರ ಬೆಳಕಿನ ಹಬ್ಬ ದೀಪಾವಳಿಯ ಬಲಿಪಾಡ್ಯಮಿಯನ್ನು ಸಂಪ್ರದಾಯಬದ್ದವಾಗಿ ಸಡಗರದಿಂದ ಆಚರಿಸಿದರು. ಬೆಳಗ್ಗೆಯೇ ಮನೆಗಳಲ್ಲಿ ದೀಪಾವಳಿ ಪಾಡ್ಯದಂದು ಸಂಪ್ರದಾಯದಂತೆ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಶನಿವಾರ ಬೆಳಕಿನ ಹಬ್ಬ ದೀಪಾವಳಿಯ ಬಲಿಪಾಡ್ಯಮಿಯನ್ನು ಸಂಪ್ರದಾಯಬದ್ದವಾಗಿ ಸಡಗರದಿಂದ ಆಚರಿಸಿದರು. ಬೆಳಗ್ಗೆಯೇ ಮನೆಗಳಲ್ಲಿ ದೀಪಾವಳಿ ಪಾಡ್ಯದಂದು ಸಂಪ್ರದಾಯದಂತೆ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿದರು.
ಪಾಡ್ಯ ಪೂಜೆ ನೆರವೇರಿದ ನಂತರ ಮನೆ ಮುಂದೆ ಪಾಂಡವರ ಪೂಜೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಸಂಪ್ರದಾಯದಂತೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ತಮ್ಮ ಮನೆಗಳ ಮುಂದೆ ಪಾಂಡವರನ್ನು, ಗುಳ್ಳವ್ವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಅಲ್ಲದೇ, ಕುಟುಂಬ ಸದಸ್ಯರೊಂದಿಗೆ ತಮ್ಮ ಇಷ್ಟದೇವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪ್ರಾರ್ಥಿಸಿದರು. ಪಾಂಡವರು ಅಜ್ಞಾತವಾಸ ಮುಗಿಸಿ ನಂತರ ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಪಾಡ್ಯದ ದಿನವೇ ತೆಗೆದುಕೊಂಡು ಬಂದಿದ್ದರ ವಿಜಯೋತ್ಸವದ ಸಂಕೇತವಾಗಿ ಮನೆಯ ಮುಂದೆ ಪಾಂಡವರು ಕೌರವರನ್ನು ಸಂಹಾರ ಮಾಡಿದ ಚಿತ್ರ ಬಿಂಬಿಸುವಂತೆ ಸಗಣಿಯಿಂದ ಗೊಂಬೆಗಳನ್ನು ಮಾಡಿ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಪಾಂಡವರು ಅಜ್ಞಾತವಾಸ ಯಶಸ್ವಿಯಾಗಿ ಪೂರ್ಣಗೊಳಿಸಿ ಸುರಕ್ಷಿತವಾಗಿ ಬರಲಿ ಎಂಬ ಸಂಕೇತವಾಗಿ ಪಾಂಡವರ (ಗುಳ್ಳವ್ವ ಪೂಜೆ) ಪೂಜೆ ಎಂದು ಕರೆಯಲಾಗುತ್ತಿದೆ ಎಂದು ಕೆಲ ಮಹಿಳೆಯರು ಹೇಳಿದರು. ಪಾಡ್ಯ ದಿನದಂದು ಮನೆಯ ಮುಂದೆ ಸೆಗಣಿಯಿಂದ ತಯಾರಿಸಿದ ಗೊಂಬೆಗಳಿಗೆ ತರಹೇವಾರಿ ಹೂವುಗಳಿಂದ ಅಲಂಕರಿಸಿ ನೈವೇಧ್ಯ ಅರ್ಪಿಸಲಾಗುತ್ತದೆ. ಬುಧವಾರ ದೀಪಾವಳಿ ಹಬ್ಬದ ಕಡೆ ಪಾಡ್ಯ ಆಚರಣೆಯೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂಪನ್ನವಾಗುತ್ತದೆ.