ಒಂದು ಬದಿಯಲ್ಲಿ ವಾಹನನಿಲುಗಡೆಗೆ ಸ್ಥಳವಾಕಾಶ ಸಾಕಾಗದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯ ಮಧ್ಯಭಾಗದವರೆಗೂ ಕೆಲವೊಮ್ಮೆ ವಾಹನಗಳನ್ನು ನಿಲುಗಡೆಮಾಡಲಾಗುತ್ತಿದೆ. ಹಿಂದಿನ ಹಾಗೇ ವಾರದ ಮೂರು ದಿನಗಳ ಒಂದೊಂದು ಬದಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಂಡಿ ಎಂದು ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಇದೆ ಹಾಗೆ ಮಾಡಲು ಬರುವುದಿಲ್ಲ ಎನ್ನುತ್ತಾರೆ. ಹಾಗದರೆ ಒಂದು ಬದಿ ನಿಲುಗಡೆ ಮಾಡಬಹುದ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರವೇ ಇಲ್ಲ. ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಹೇರಿರುವ ನಿಷೇಧ ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಮುಖ್ಯರಸ್ತೆಯ ಒಂದು ಬದಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದರಿಂದ ಸಾಕಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣದ ಬಗ್ಗೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಸಾರ್ವಜನಿಕರನ್ನು ಹೈರಾಣಾಗುವಂತೆ ಮಾಡಿದೆ.ಪಟ್ಟಣದಲ್ಲಿ ಬೈಪಾಸ್ ರಸ್ತೆ ಹಾದುಹೋಗಿದ್ದರೂ ಪಟ್ಟಣದ ಮುಖ್ಯರಸ್ತೆ ಮಾತ್ರ ವಾಹನನಿಬಿಡವಾಗಿದೆ. ಪಟ್ಟಣದ ಎಸ್ಬಿಐ ವೃತ್ತದಿಂದ ಸಕಲೇಶ್ವರಸ್ವಾಮಿ ದೇವಸ್ಥಾನದವರೆಗಿನ ಮುಖ್ಯರಸ್ತೆ ಪ್ರತಿದಿನ ದಟ್ಟವಾಹನಗಳ ಸಂಚಾರದಿಂದ ತುಂಬಿದ್ದು ವಾಹನಗಳ ಸಣ್ಣ ಸಮಸ್ಯೆಯಾದರೂ ಕಿ. ಮೀ. ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಲುಗಡೆಯಾಗುವುದು ಸಾಮಾನ್ಯ. ಇಂತಹ ದೃಶ್ಯ ಪಟ್ಟಣದಲ್ಲಿ ನಿತ್ಯವೂ ಇದ್ದರೂ ವಾಹನ ದಟ್ಟಣೆ ನಿಯಂತ್ರಿಸಬೇಕಿದ್ದ ಪೊಲೀಸ್ ಇಲಾಖೆ ಮಾತ್ರ ಗಾಢನಿದ್ರೆಯಲ್ಲಿದೆ.ಎಲ್ಲೆಲ್ಲೂ ಆಟೋ ನಿಲ್ದಾಣ:
ಪಟ್ಟಣದಲ್ಲಿ ಕಳೆದ ಎರಡು ವರ್ಷದವರೆಗೂ ಆಟೋಗಳಿಗಾಗಿ ಪುರಸಭೆ ಮುಂಭಾಗ, ಎಸ್.ಪಿ ರಸ್ತೆ ಹಾಗೂ ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಆಟೋ ನಿಲ್ದಾಣಗಳಿದ್ದವು. ಆದರೆ, ಇತ್ತೀಚಿನ ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದ ಆಟೋಗಳ ಸಂಚಾರ ನಿಲುಗಡೆಗೆ ಮಿತಿಯೇ ಇಲ್ಲದಾಗಿದ್ದು ಎಲ್ಲಿ ನಿಲುಗಡೆ ಮಾಡುತ್ತಾರೋ ಅದೇ ಆಟೋ ನಿಲ್ದಾಣ ಎಂಬಾಂತಾಗಿದೆ. ಇದರಿಂದ ಇತರೆ ವಾಹನ ಸವಾರರು ಕಿರಿಕಿರಿ ಅನುಭವಿಸಿದರೆ, ಸಾರ್ವಜನಿಕರು ಆಟೋಗಳ ಮದ್ಯೆ ಸಂಚರಿಸಬೇಕಿದೆ. ಹಿಂದಿದ್ದ ಆಟೋಗಳ ನಿಲ್ದಾಣದಲ್ಲಿ ಆಟೋಗಳ ನಿಲುಗಡೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಆಟೋಗಳ ಆಟೋಟೋಪ ಮಿತಿ ಮೀರಿದ್ದರು ಪೊಲೀಸರು ಕಂಡು ಕಾಣದಂತೆ ಸಂಚರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕಾರಣ: ೨೦೧೨ರಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದಿಂದಾಗಿ ಅಂದಿನ ಜಿಲ್ಲಾಧಿಕಾರಿ ಹೆದ್ದಾರಿಯಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಿದ್ದಾರೆ. ಅದುವರಗೆ ವಾರದ ಮೂರು ದಿನ ಮುಖ್ಯ ರಸ್ತೆಯ ಒಂದೊಂದು ಬದಿ ವಾಹನ ನಿಲುಗಡೆಗೆ ಅವಕಾಶವಿದ್ದರೆ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳವನ್ನು ಗುರುತಿಸಲಾಗಿತ್ತು. ಆದರೆ, ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಗೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು. ಹೆದ್ದಾರಿಯ ಒಂದು ಬದಿ ಸಾಕಷ್ಟು ವರ್ಷಗಳಿಂದ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಒಂದು ಬದಿಯಲ್ಲಿ ವಾಹನನಿಲುಗಡೆಗೆ ಸ್ಥಳವಾಕಾಶ ಸಾಕಾಗದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯ ಮಧ್ಯಭಾಗದವರೆಗೂ ಕೆಲವೊಮ್ಮೆ ವಾಹನಗಳನ್ನು ನಿಲುಗಡೆಮಾಡಲಾಗುತ್ತಿದೆ. ಹಿಂದಿನ ಹಾಗೇ ವಾರದ ಮೂರು ದಿನಗಳ ಒಂದೊಂದು ಬದಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಂಡಿ ಎಂದು ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಇದೆ ಹಾಗೆ ಮಾಡಲು ಬರುವುದಿಲ್ಲ ಎನ್ನುತ್ತಾರೆ. ಹಾಗದರೆ ಒಂದು ಬದಿ ನಿಲುಗಡೆ ಮಾಡಬಹುದ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರವೇ ಇಲ್ಲ. ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಹೇರಿರುವ ನಿಷೇಧ ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಮುಖ್ಯರಸ್ತೆಯ ಒಂದು ಬದಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದರಿಂದ ಸಾಕಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಪೊಲೀಸರು ನಾಪತ್ತೆ:ಮುಖ್ಯರಸ್ತೆಯಲ್ಲಿ ಸಾಕಷ್ಟು ವಾಹನ ದಟ್ಟಣೆ ಇರುವುದರಿಂದ ಹಿಂದೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಕನಿಷ್ಠ ನಾಲ್ವರು ಪೊಲೀಸರನ್ನು ನಿಯೋಜಿಸುತ್ತಿದ್ದರು. ಆದರೆ, ಈಗ ಮುಖ್ಯರಸ್ತೆಯಲ್ಲಿ ಪೊಲೀಸರ ಮುಖ ಕಾಣುವುದೇ ಅಪರೋಪವಾಗಿದೆ. ಪಟ್ಟಣ ಠಾಣೆಯಲ್ಲಿ ಓರ್ವ ಇನ್ಸ್ಪೆಕ್ಟರ್, ಇಬ್ಬರು ಪಿಎಸ್ಐ, ನಾಲ್ವರು ಎಎಸ್ಐ,೮ ಮುಖ್ಯಪೇದೆಗಳು ಹಾಗೂ ೧೮ ಪೊಲೀಸ್ ಪೇದೆಗಳಿದ್ದಾರೆ. ಆದರೆ, ಇಷ್ಟೊಂದು ಸಿಬ್ಬಂದಿ ಇದ್ದರೂ ಟ್ರಾಫಿಕ್ ನಿಯಂತ್ರಣಕ್ಕೆ ಸಿಬ್ಬಂದಿಯೇ ಇಲ್ಲದಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.ಕಾಲುದಾರಿಯೆ ವ್ಯಾಪಾರ ಸ್ಥಳ:
ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ಇದೆ. ಹಾಗೇಯೆ ವಾರದ ಸಂತೆ ಸಹ ನಿಗಧಿತ ಸ್ಥಳದಲ್ಲೆ ನಡೆಯುತ್ತದೆ. ಆದರೆ, ಪೋಲಿಸರು ಹಾಗೂ ಪುರಸಭೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ತರಕಾರಿ ಮಾರುಕಟ್ಟೆಗಿಂತ ಬೀದಿಬದಿಯಲ್ಲೆ ಹೆಚ್ಚಿನ ಅಂಗಡಿಗಳು ತಲೆ ಎತ್ತಿದ್ದು ಎಲ್ಲೆಂದರಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನೂ ವಾರದ ಸಂತೆಯಾದ ಗುರುವಾರ ಸಂತೆ ನಡೆಯುವ ಸ್ಥಳವಾದ ಎಪಿಎಂಸಿಗಿಂತ ಹೆಚ್ಚಿನ ಅಂಗಡಿಗಳನ್ನು ಪುರಸಭೆ ಮುಂಭಾಗದ ಬೀದಿಬದಿಯಲ್ಲೆ ಹಾಕಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಪೋಲಿಸ್ ಇಲಾಖೆಗೆ ಹಾಗೂ ಪುರಸಭೆಗೆ ಮನವಿ ಮಾಡಿದ್ದರು ವಾರದಿಂದ ವಾರಕ್ಕೆ ಬೀದಿಬದಿ ಅಂಗಡಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಜೋಪಡಿ ಸಾಮ್ರಾಜ್ಯ: ಪಟ್ಟಣದ ಮುಖ್ಯರಸ್ತೆಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದ ಪುರಸಭೆ ಅಧಿಕಾರಿಗಳು ಹಳೇ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸದ್ಯ ಈ ಸ್ಥಳ ಜೋಪಡಿಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದ್ದು ಸುಂದರ ಸಕಲೇಶಪುರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.