ಸಾರಾಂಶ
ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಮುರಿಯುವವರಿಗೆ ಸಂಚಾರಿ ಠಾಣೆ ಪೊಲೀಸರು ದೊಡ್ಡ ಎಚ್ಚರಿಕೆ ರವಾನಿಸಿದ್ದಾರೆ. ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಗೆ ₹17,000 ದಂಡ ವಿಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಗೆ ₹17,000 ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ನಗರದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿ ಹೋಗುತ್ತಿದ್ದ ಬೈಕ್ ಸವಾರನನ್ನು ಹಿಡಿದು ಪರಿಶೀಲಿಸಿದ್ದಾರೆ. ಆಗ ಭಾರಿ ಪ್ರಮಾಣದ ದಂಡ ಬಾಕಿ ಇರುವುದು ಕಂಡುಬಂದಿದೆ. ಬಳಿಕ ಅಲ್ಲಿಯೇ ದಂಡ ಕಟ್ಟಿಸಿಕೊಂಡು ಆತನನ್ನು ಬಿಟ್ಟು ಕಳಿಸಲಾಗಿದೆ.
ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಸಮೀಪ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಮುಖ್ಯ ಪೇದೆ ಸುರೇಶ್ ಅವರು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು ಸಿಸಿ ಕ್ಯಾಮೆರಾದಲ್ಲಿ ದಾಖಲಾದ ವಾಹನವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ವಾಹನದ ನಂಬರ್ ಪರಿಶೀಲಿಸಿದಾಗ, ಅದಕ್ಕೆ ಸಂಬಂಧಿಸಿದಂತೆ ₹17 ಸಾವಿರ ದಂಡ ಕಟ್ಟಬೇಕಿರುವ ವಿಚಾರ ಗೊತ್ತಾಗಿದೆ. ಟ್ರಾಫಿಕ್ ಪೊಲೀಸರು ಕೈಗಿಟ್ಟ ಮೀಟರ್ ಉದ್ದದ ಪಟ್ಟಿ ನೋಡಿ ಬೈಕ್ ಸವಾರ ಹೌಹಾರಿದ್ದಾನೆ. ಬೇರೆ ದಾರಿಯಿಲ್ಲದೇ, ತಪ್ಪಿಗೆ ದಂಡ ತೆತ್ತು ಸಾಗಿದ್ದಾನೆ.- - - -2ಎಸ್‌ಎಂಜಿಕೆಪಿ10:
ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಸಮೀಪ ಸಂಚಾರಿ ಪೊಲೀಸರು ಬೈಕ್ ಸವಾರನಿಗೆ ₹17 ಸಾವಿರ ದಂಡ ವಿಧಿಸಿ, ರೂಲ್ಸ್ ಬ್ರೇಕ್ ಮಾಡಿದ್ದರ ಪಟ್ಟಿ ನೀಡಿದರು.