ಸಾರಾಂಶ
ಇಂಡಿ ಗ್ರಾಮೀಣ ಸಿಪಿಐ ಎಂ.ಎಂ.ಡಪ್ಪಿನ ಹಾಗೂ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ದಾಳಿ ಮಾಡಿ ಬುಲೆರೋ ವಾಹನ ವಶಪಡಿಸಿಕೊಂಡು ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.
ಇಂಡಿ: ತಾಲೂಕಿನ ತಡವಲಗಾ ಹಳೆ ರಸ್ತೆಯ ಸಾಧು ಮುತ್ಯಾನ ವಸತಿ ಸಮೀಪ ಬುಲೇರೋ ಪಿಕ್‌ಆಪ್ ವಾಹನದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂಡಿ ಗ್ರಾಮೀಣ ಸಿಪಿಐ ಎಂ.ಎಂ.ಡಪ್ಪಿನ ಹಾಗೂ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ದಾಳಿ ಮಾಡಿ ಬುಲೆರೋ ವಾಹನ ವಶಪಡಿಸಿಕೊಂಡು ಹಾಗೂ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. 50 ಕೆಜಿ ಪಡಿತರ ಅಕ್ಕಿ ತುಂಬಿದ ಒಟ್ಟು 15 ಚೀಲಗಳು ,ಒಟ್ಟು 640 ಕೆಜಿಯ 14,080 ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಇಂಡಿ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.